- Home
- Entertainment
- Sandalwood
- Photos: ವಿಜಯ್ ಜೊತೆ ಮದುವೆಗೂ ಮುನ್ನ, ಶ್ರೀಲಂಕಾದಲ್ಲಿ ರಶ್ಮಿಕಾ ಮಂದಣ್ಣ ಬ್ಯಾಚುಲರೇಟ್ ಪಾರ್ಟಿ!?
Photos: ವಿಜಯ್ ಜೊತೆ ಮದುವೆಗೂ ಮುನ್ನ, ಶ್ರೀಲಂಕಾದಲ್ಲಿ ರಶ್ಮಿಕಾ ಮಂದಣ್ಣ ಬ್ಯಾಚುಲರೇಟ್ ಪಾರ್ಟಿ!?
ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು ಇದೀಗ ತಮ್ಮ ಗರ್ಲ್ಸ್ ಗ್ಯಂಗ್ ಜೊತೆ ಶ್ರೀಲಂಕಾಕ್ಕೆ ಹಾರಿದ್ದಾರೆ. ವಿಜಯ್ ದೇವರಕೊಂಡ ಜೊತೆ ಮದುವೆಗೂ ಮುನ್ನ ಬ್ಯಾಚುಲರೇಟ್ ಪಾರ್ಟಿ ಜೋರಾಗಿಯೇ ನಡೆಯುತ್ತಿದೆ ಎನ್ನುತ್ತಿದ್ದಾರೆ ಜನ.

ರಶ್ಮಿಕಾ ಮಂದಣ್ಣ
ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಬಗ್ಗೆ ಎಲ್ಲೆಡೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಫೆಬ್ರವರಿಯಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ರಶ್ಮಿಕಾ ತನ್ನ ಗೆಳತಿಯರ ಜೊತೆ ಶ್ರೀಲಂಕಾದಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.
ಶ್ರೀಲಂಕಾದಲ್ಲಿ ರಶ್ಮಿಕಾ
ರಶ್ಮಿಕಾ ಮಂದಣ್ಣ ತಮ್ಮ ಶ್ರೀಲಂಕಾ ಪ್ರವಾಸದ ಹಲವಾರು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ "ಶ್ರೀಲಂಕಾಗೆ ಸ್ವಾಗತ" ಎಂಬ ಫಲಕವಿದೆ. ಮುಂದೆ, ಅವರು ತಮ್ಮ ಸ್ನೇಹಿತರೊಂದಿಗೆ ಬೀಚ್‌ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
ಗರ್ಲ್ಸ್ ಗ್ಯಾಂಗ್ ಜೊತೆ ಮಸ್ತಿ
ರಶ್ಮಿಕಾ ಶೇರ್ ಮಾಡಿರುವ ಫೋಟೊಗಳಲ್ಲಿ ಗರ್ಲ್ಸ್ ಸೂರ್ಯಾಸ್ತವನ್ನು ಎಂಜಾಯ್ ಮಾಡುತ್ತಿರುವ ಫೋಟೋಸ್, ಎಳ ನೀರಿನಿಂದ ಹಿಡಿದು ಡ್ರಿಂಕ್ಸ್ ಕೇಕ್ ವರೆಗೂ, ಉದ್ಯಾನದಲ್ಲಿ ಅಡ್ಡಾಡುತ್ತಾ ರಾತ್ರಿ ಪಾರ್ಟಿಯನ್ನು ಆನಂದಿಸುವವರೆಗೆ. ರಶ್ಮಿಕಾ ನೆರಳಿನಲ್ಲಿ ಬೆಂಚ್ ಮೇಲೆ ಮಲಗಿರುವ ಎಲ್ಲಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಹೇಳಿದ್ದೇನು?
ಇತ್ತೀಚೆಗೆ ನನಗೆ 2 ದಿನ ರಜೆ ಸಿಕ್ಕಿತು ಮತ್ತು ನನ್ನ ಹುಡುಗಿಯರೊಂದಿಗೆ ಸಮಯ ಕಳೆಯಲು ನನಗೆ ಈ ಅವಕಾಶ ಸಿಕ್ಕಿತು ಮತ್ತು ನಾವು ಶ್ರೀಲಂಕಾದಲ್ಲಿರುವ ಈ ಸುಂದರವಾದ ತಾಣಕ್ಕೆ ಹೋದೆವು.. ಗರ್ಲ್ಸ್ ಟ್ರಿಪ್ - ಎಷ್ಟೇ ಚಿಕ್ಕದಾದರೂ ಪರವಾಗಿಲ್ಲ ಬೆಸ್ಟ್ ಆಗಿರುತ್ತೆ!! ಮೈ ಗರ್ಲ್ಸ್ ಆರ್ ಬೆಸ್ಟ್! ಕೆಲವರು ಮಿಸ್ಸಿಂಗ್, ಆದರೆ ಬೆಸ್ಟ್!! ಎಂದು ರಶ್ಮಿಕಾ ಬರೆದಿದ್ದಾರೆ.
ಇದು ಬ್ಯಾಚಲರೇಟ್ ಪಾರ್ಟೀನ?
ರಶ್ಮಿಕಾ ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಎಂಜಾಯ್ ಮಾಡುತ್ತಿರುವುದನ್ನು ನೋಡಿ ಜನರು ಇದು ಮದುವೆಗೂ ಮುನ್ನ ನಡೆಯುವ ಬ್ಯಾಚಲರೇಟ್ ಪಾರ್ಟಿಯಂತೆ ಕಾಣಿಸುತ್ತಿದೆ. ಹಾಗಿದ್ರೆ ಶೀಘ್ರದಲ್ಲಿ ಮದುವೆ ಪಕ್ಕಾ ಎಂದಿದ್ದಾರೆ.
ಜನ ಏನ್ ಹೇಳಿದ್ದಾರೆ?
ಒಬ್ಬರು, "ಬ್ಯಾಚಿಲೋರೆಟ್ ಪಾರ್ಟಿ ಅದ್ಭುತವಾಗಿತ್ತು" ಎಂದರೆ. ಮತ್ತೊಬ್ಬರು, "ಗರ್ಲ್ಸ್ ಟ್ರಿಪ್ ಅಂದ್ರೆ ರಶ್ಮಿಕಾ, ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆಯೇ?" ಎಂದರು. ಮತ್ತೊಬ್ಬ ಅಭಿಮಾನಿ, "ನೀವು ಬ್ಯಾಚಲೋರೆಟ್ ಪಾರ್ಟಿ ಆಚರಿಸಲು ಹೋಗಿದ್ದೀರಾ, ಮೇಡಂ?" ಎಂದು ಕೇಳಿದ್ದಾರೆ. ಮತ್ತೊಬ್ಬ ಅಭಿಮಾನಿ, "ಬಹುಶಃ ಇದು ಬ್ಯಾಚಲೋರೆಟ್ ಪಾರ್ಟಿಯಾಗಿರಬಹುದು, ಯಾರಿಗೆ ಗೊತ್ತು, ಅಂದರೆ ಅವಳು ಶೀಘ್ರದಲ್ಲೇ ಮದುವೆಯಾಗುತ್ತಿದ್ದಾಳೆ" ಎಂದು ಬರೆದಿದ್ದಾರೆ.
"ಸಮಯ ಬಂದಾಗ ನಾವು ಮಾತನಾಡುತ್ತೇವೆ."
ರಶ್ಮಿಕಾ ಮತ್ತು ವಿಜಯ್ ತಮ್ಮ ಮದುವೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. "ದಿ ಹಾಲಿವುಡ್ ರಿಪೋರ್ಟರ್" ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಅವರ ವಿವಾಹ ಯೋಜನೆಗಳ ಬಗ್ಗೆ ಕೇಳಿದಾಗ, ರಶ್ಮಿಕಾ, "ನಾನು ಮದುವೆಯನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಬಯಸುವುದಿಲ್ಲ. ಸಮಯ ಬಂದಾಗ, ನಾವು ಅದರ ಬಗ್ಗೆ ಮಾತನಾಡುತ್ತೇವೆ" ಎಂದು ಹೇಳಿದರು.
ಇತ್ತೀಚೆಗೆ ಎಂಗೇಜ್ ಆಗಿದ್ದ ರಶ್ಮಿಕಾ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಎಂಗೇಜ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ರಶ್ಮಿಕಾ ಕೈಯಲ್ಲಿ ಉಂಗುರ ಕೂಡ ಇದೆ. ಆದರೆ ಇದನ್ನು ಕೂಡ ಈ ಜೋಡಿ ಇಲ್ಲಿವರೆಗೂ ಕನ್’ಫರ್ಮ್ ಮಾಡಿಲ್ಲ.
ರಶ್ಮಿಕಾ ಮಂದಣ್ಣ ಸಿನಿಮಾಗಳು
ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್ ಫ್ರೆಂಡ್ ಮತ್ತು ತಾಮ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ ಸಕ್ಸಸ್ ಕಂಡಿದ್ದವು. ಇನ್ನು ರಶ್ಮಿಕಾ ಬಲಿವುಡ್ ನಲ್ಲಿ ಕಾಕ್ ಟೇಲ್ 2 ಮತ್ತು ತೆಲುಗಿನಲ್ಲಿ ಮೈಸಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

