ಸ್ಯಾಂಡಲ್’ವುಡ್ ಸಿನಿಮಾ ತೀರ್ಥರೂಪ ತಂದೆಯವರಿಗೆ ತಂಡ ಸಿನಿಮಾ ಶುರುವಾಗುವ ಮುನ್ನ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ.
sandalwood Dec 17 2025
Author: Pavna Das Image Credits:Instagram
Kannada
ರಚನಾ ಇಂದರ್
ನಟಿ ರಚನಾ ಇಂದರ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಸಿನಿಮಾ ಶುರುವಾಗುವ ಮುನ್ನ ಜನವರಿಯಲ್ಲಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.
Image credits: Instagram
Kannada
ಸಿನಿಮಾ ತಂಡದ ಜೊತೆ ಭೇಟಿ
ನಟಿ ರಚನಾ ಇಂದರ್, ಹಿರಿಯ ನಟಿ ಸಿತಾರಾ, ಸಿನಿಮಾ ನಾಯಕ ನಿಹಾರ್ ಮುಖೇಶ್ ಜೊತೆ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ.
Image credits: Instagram
Kannada
ಅಸ್ಸಾಂನ ಶಕ್ತಿ ಪೀಠ
ಅಸ್ಸಾಂನಲ್ಲಿರುವ ಶಕ್ತಿ ಪೀಠ ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿ ಬೇಡಿಕೊಂಡರೆ, ನಮ್ಮ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಹಾಗಾಗಿ ಸಿನಿಮಾ ತಂಡ ಭೇಟಿ ನೀಡಿದೆ.
Image credits: Instagram
Kannada
ಚಿತ್ರದ ಕಥೆ ಏನು?
ತೀರ್ಥರೂಪ ತಂದೆಯವರಿಗೆ ಇದು ಕುಟುಂಬದ ಸಂಬಂಧಗಳು, ತಂದೆ-ತಾಯಿಗಳ ಮೌಲ್ಯಗಳು ಮತ್ತು ಜೀವನದ ಪಾಠಗಳ ಬಗ್ಗೆ ಹೇಳುವ ಹೃದಯಸ್ಪರ್ಶಿ ಕಥೆಯಾಗಿದೆ.
Image credits: Instagram
Kannada
ಯಾರೆಲ್ಲಾ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ರಚನಾ ಇಂದರ್, ಸಿತಾರ, ನಿಹಾರ್, ರಾಜೇಶ್ ನಟರಂಗ, ಅಜಿತ್ ಹಂಡೆ, ರವೀಂದ್ರ ವಿಜಯ್ ಸೇರಿ ಹಲವಾರು ನಟ ನಟಿಯರು ನಟಿಸಿದ್ದಾರೆ. ಚಿತ್ರ ಜನವರಿ 1ರಂದು ರಿಲೀಸ್ ಆಗಲಿದೆ.
Image credits: Instagram
Kannada
ತೆಲುಗಿನಲ್ಲೂ ರಿಲೀಸ್
ಈ ಸಿನಿಮಾ ತೆಲುಗು ಭಾಷೆಯಲ್ಲಿ ‘ಪ್ರಿಯಮೈನಾ ನಾನಕು’ ಹೆಸರಿನಲ್ಲಿ ರಿಲೀಸ್ ಆಗಲಿದ್ದು. ಹೊಂದಿಸಿ ಬರೆಯಿರಿ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.