- Home
- Entertainment
- Sandalwood
- ಅಬ್ಧಿಯುಮೊರ್ಮೆ ಕಾಲವಶದಿಂ... ರಾಜ್ ಬಿ ಶೆಟ್ಟಿಯಿಂದ ಯಶ್ ರಾವಣ ಪಾತ್ರಕ್ಕೆ 'ಪಂಪ ರಾಮಾಯಣ' ಶೈಲಿಯಲ್ಲಿ ಮೆಚ್ಚುಗೆ!
ಅಬ್ಧಿಯುಮೊರ್ಮೆ ಕಾಲವಶದಿಂ... ರಾಜ್ ಬಿ ಶೆಟ್ಟಿಯಿಂದ ಯಶ್ ರಾವಣ ಪಾತ್ರಕ್ಕೆ 'ಪಂಪ ರಾಮಾಯಣ' ಶೈಲಿಯಲ್ಲಿ ಮೆಚ್ಚುಗೆ!
‘ರಾಮಾಯಣ’ ಚಿತ್ರದಲ್ಲಿನ ಯಶ್ ಅವರ ರಾವಣ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ. ಈ ಮೆಚ್ಚುಗೆಗೆ ನಟ ಯಶ್ ಅವರು ‘ಥ್ಯಾಂಕ್ಯೂ ಶೆಟ್ರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ’- ಹೀಗೆ ಹೇಳುತ್ತಾ ‘ರಾಮಾಯಣ’ ಚಿತ್ರದಲ್ಲಿನ ಯಶ್ ಅವರ ರಾವಣ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿರುವುದು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ.
ರಾಜ್ ಬಿ ಶೆಟ್ಟಿ ಅವರ ಈ ಮೆಚ್ಚುಗೆಗೆ ನಟ ಯಶ್ ಅವರು ‘ಥ್ಯಾಂಕ್ಯೂ ಶೆಟ್ರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿನವ ಪಂಪ ಎಂದೇ ಪ್ರಸಿದ್ಧಿಯಾಗಿದ್ದ ನಾಗಚಂದ್ರನ ‘ಪಂಪ ರಾಮಾಯಣ’ ಕಾವ್ಯದಲ್ಲಿ ರಾವಣನನ್ನು ಪ್ರತಿ ನಾಯಕನನ್ನಾಗಿ ತೆಗೆದುಕೊಂಡು ಕೊಂಡಾಡಿದ್ದಾರೆ.
‘ರಾವಣ ದುಷ್ಟನಲ್ಲ, ಆಕಸ್ಮಿಕವಾಗಿ ಸೀತೆಯನ್ನು ಕಂಡು ಆಕೆಯ ಮೇಲೆ ಮೋಹಗೊಂಡು ಕೊನೆಗೆ ಸಾಯುವಂತಾಯಿತು’ ಎಂದು ಹೇಳುವ ಸಂದರ್ಭದಲ್ಲಿ ‘ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ’.
(ಇದರರ್ಥ- ಸಮುದ್ರ ಕೂಡ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆ ಮೀರುತ್ತದೆ ಅಲ್ಲವೇ?) ಎಂದು ಬರೆಯಲಾಗಿದೆ. ಕವಿ ನಾಗಚಂದ್ರನ ಈ ಸಾಲುಗಳನ್ನೇ ಪ್ರಸ್ತಾಪಿಸಿ ಯಶ್ ಅವರ ರಾವಣ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ ರಾಜ್ ಬಿ ಶೆಟ್ಟಿ.
ಇನ್ನು ಇತ್ತಿಚೆಗೆ ರಾಜ್ ಬಿ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಅವರ ನಟನೆಯ ‘ರಕ್ಕಸಪುರದೋಳ್’ ಸಿನಿಮಾದ ಲುಕ್ ಬಿಡುಗಡೆಯಾಗಿದೆ. ಹೊತ್ತಿ ಉರಿಯುವ ಬೆಂಕಿಯಲ್ಲಿ ಕ್ರೋಧ ಭರಿತ ಲುಕ್‌ನಲ್ಲಿ ರಾಜ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

