ಜೈಲಿನಿಂದ ಹೊರ ಬಂದು ಫ್ಯಾಮಿಲಿ ಜೊತೆ ಹೊಸ ವರ್ಷ ಆಚರಿಸಿದ ನಟಿ ರಾಗಿಣಿ ದ್ವಿವೇದಿ!
144 ದಿನಗಳ ನಂತರ ಜೈಲಿನಿಂದ ಹೊರ ಬಂದ ರಾಗಿಣಿ ಕುಟುಂಬಸ್ಥರು, ಆಪ್ತ ಸ್ನೇಹಿತರ ಜೊತೆ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ರಾಗಿಣಿ ಕಂಗೊಳ್ಳಿಸುತ್ತಿರುವುದು ಹೀಗೆ...
ಹೊಸ ವರ್ಷವನ್ನು ಮನೆಯವರ ಜೊತೆ ಮತ್ತೆ ಆಚರಣೆ ಮಾಡಿದ ರಾಗಿಣಿ.
ಹೊಸ ವರ್ಷವನ್ನು ಜೈಲಿನಲ್ಲಿಯೇ ಆಚರಣೆ ಮಾಡಿದ ಕಾರಣ ಮನೆಗೆ ಬಂದ ನಂತರ ಸೆಲೆಬ್ರೇಷನ್ ಮಾಡಿದ್ದಾರೆ.
ಸೆಲ್ವಾರ್ ಕಮೀಸ್ ಹಾಗೂ ಮಲ್ಲಿಗೆ ಹೂ ಮುಡಿದು ಸಂಭ್ರಮಿಸಿದ್ದಾರೆ.
'ನಗು ನಗುತ್ತಾ ಇರಲಿ, ಇಡೀ ಪ್ರಪಂಚವೇ ಚಿಂತಿಸಲಿ ಯಾಕೆಂದು' ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.
ಕಷ್ಟ ಸಮಯದಲ್ಲಿ ನಿಂತ ನನ್ನ ಪರವಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳೇ ಶಕ್ತಿ ಅವರಿಗೆ ನನ್ನಿಂದ ಧನ್ಯವಾದಗಳು.
ಭಾರತೀಯ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ದೇಶದಲ್ಲಿ ಹಕ್ಕಿರುತ್ತದೆ, ನ್ಯಾಯ ನನ್ನ ಪರವಾಗಿ ನಿಲ್ಲುತ್ತದೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೀಪ್ ಶೈನಿಂಗ್ ಎಂದು ವಿಶ್ ಮಾಡಿದ್ದಾರೆ.