ರಾಗಿಣಿ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಚಿತ ಆರೋಗ್ಯ ತಪಾಸಣೆ; ಎಲ್ಲಿ, ಯಾವಾಗ?
ಗಿಣಿ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳಿಂದ ಭರ್ಜರಿ ಸಿದ್ಧತೆ. ಬೆಳಗ್ಗೆ 10ರಿಂದ ಸಂಜೆ 5ವರೆಗೂ ತಪಾಸಣೆ...
ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮೇ 24ರಂದು 33ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ದಿನ ಅಭಿಮಾನಿಗಳು ವಿಶೇಷವಾಗಿ ಆಚರಿಸಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದಿಂದ ಬೆಂಗಳೂರಿನ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಮೇ 24 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದಾರೆ.
ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಜನರಿಗೆ ಉಪಕಾರವಾಗುವಂತಹ ಕಾರ್ಯ ನಡೆಸಿ ರಾಗಿಣಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಸದ್ಯ ರಾಗಿಣಿ ಸಿನಿಮಾ ಕೆಲಸ ಮತ್ತು ಸಮಾಜ ಸೇವೆಯಲ್ಲಿ ಬ್ಯುಸಿಯಾಗಿದ್ದಾರೆ. ಮೂರ್ನಾಲ್ಕು ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
15 ವರ್ಷಗಳ ಸಿನಿ ಜರ್ನಿಯಲ್ಲಿ 40 ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ರಾಗಿಣಿ ದ್ವಿವೇದಿ 90 ದಿನಗಳ ಕಸ್ಟಡಿಯಲ್ಲಿ ಏನೆಲ್ಲಾ ಆಯ್ತು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.
ಅಷ್ಟಲ್ಲದೆ ಈ ವರ್ಷ ರಾಗಿಣಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಲಂಡನ್‌ನಲ್ಲಿ ಚಿತ್ರೀಕರಣ ಕೂಡ ಮಾಡಿದ್ದಾರೆ. ಹೀಗಾಗಿ ಇದು ನನ್ನ ಲಕ್ಕಿ ವರ್ಷ ಎಂದು ಹೇಳಿಕೊಂಡಿದ್ದಾರೆ.
ರಾಗಿಣಿ ಸಹಿ ಮಾಡಿರುವ ಹಿಂದಿ ಚಿತ್ರದ ಹೆಸರು ವಾಲ್ಕೇರ್ ಹೌಸ್ ಎಂದು. ಈಗಾಗಲೇ ಲಂಡನ್‌ನಲ್ಲಿ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದು ಹಾರರ್ ಸಿನಿಮಾ.