'ಶ್ರೀಲೀಲಾ ಮೈಬಣ್ಣವಲ್ಲ, ಆಕೆಯ ಮನಸ್ಸೇ ಗೋಲ್ಡ್..' ದಿವ್ಯಾಂಗ ಮಕ್ಕಳ ಜೊತೆ ಬ್ಯೂಟಿಯ ಬಿಂದಾಸ್ ಡೇ!
ವಿಶೇಷ ಅಭಿಮಾನಿಯೊಟ್ಟಿಗೆ ಕಾಣಿಸಿಕೊಂಡ ಶ್ರೀಲೀಲಾ. ಕೋಟಿ ಬೆಲೆ ಬಾಳುತ್ತಿದ್ದರು ಎಷ್ಟು ಸಿಂಪಲ್ ಎಂದ ನೆಟ್ಟಿಗರು.....
ಕಿಸ್ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಪುಷ್ಪ 2 ಹಾಡು ರಿಲೀಸ್ ಆದ ಮೇಲೆ.
ಇತ್ತೀಚಿಗೆ ಸಿಕ್ಕಾಪಟ್ಟೆ ಖಾಸಗಿ ಕಾರ್ಯಕ್ರಮಗಳು ಹಾಗೂ ಟಿವಿ ಶೋಗಳಲ್ಲಿ ಭಾಗಿಯಾಗುತ್ತಿರುವ ಶ್ರೀಲೀಲಾ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದೀಗ ಶ್ರೀಲೀಲಾ ದಿವ್ಯಾಂತ ಪುಟ್ಟ ಹುಡುಗನನ್ನು ಎತ್ತಿಕೊಂಡು ಮುದ್ದು ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಶ್ರೀಲಾ ಜೊತೆ ಪಾಪು ಸಖತ್ ಖುಷಿ ಪಟ್ಟಿದೆ.
ಶ್ರೀಲೀಲಾ ಈ ಫೋಟೋವನ್ನು ತಮ್ಮ ಕ್ಯಾರವಾನ್‌ನಲ್ಲಿ ಕ್ಲಿಕ್ ಮಾಡಲಾಗಿದೆ ಅಂತಾರೆ ಫ್ಯಾನ್ಸ್. ಈ ಪುಟ್ಟ ಹುಡುಗ ಅಭಿಮಾನಿಯೋ ಅಥವಾ ಲೀಲಾ ದತ್ತು ತೆಗೆದುಕೊಂಡಿರುವ ಹುಡುಗನೋ ಗೊತ್ತಿಲ್ಲ.
ಹೌದು! ಶ್ರೀಲೀಲಾ ಈಗಾಗಲೆ ಇಬ್ಬರು ಪುಟ್ಟ ಮಕ್ಕಳನ್ನು ದತ್ತು ಪಡೆದಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲವಾದರೂ ನಿಜ ಅಂತಾರೆ ಫ್ಯಾನ್ಸ್.
ಈ ಪುಟ್ಟ ಹುಡುಗನನ್ನು ಶ್ರೀಲೀಲಾ ದತ್ತು ತೆಗೆದುಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಶ್ರೀಲೀಲಾ ದುಡಿಯುತ್ತಿರುವ ಹಣದಿಂದ ಸಮಾಜ ಸೇವೆ ಮಾಡುತ್ತಿದ್ದಾರೆ.
ಶ್ರೀಲೀಲಾ ಮೈಬಣ್ಣವಲ್ಲ, ಆಕೆಯ ಮನಸ್ಸೇ ಗೋಲ್ಡ್, ಬೇರೆ ನಟಿಯರು ಹತ್ತಿರ ಕೂಡ ಹೋಗುತ್ತಿರಲಿಲ್ಲ ಆದರೆ ಈಕೆ ಮುದ್ದಾಡುತ್ತಿದ್ದಾಳೆ ಎಂದು ಸಖತ್ ಪಾಸಿಟಿವ್ ಕಾಮೆಂಟ್ಸ್ ಬಂದಿದೆ.