ಕಾಶ್ಮೀರದಲ್ಲಿ ಪುನೀತ್ ರಾಜ್‌ಕುಮಾರ್; 'ಜೇಮ್ಸ್' ಸಿನಿಮಾ ಶೂಟಿಂಗಲ್ಲಿ ಭಾಗಿ!
ಪುನೀತ್ ರಾಜ್‌ಕುಮಾರ್ ಅಭಿನಯದ, ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ.
ಈಗಾಗಲೇ ಕಾಶ್ಮೀರ ತಲುಪಿರುವ ಚಿತ್ರತಂಡ ಅಲ್ಲಿನ ಹವಾಗುಣಕ್ಕೆ ಒಗ್ಗುವ ಪ್ರಯತ್ನದಲ್ಲಿದೆ.
ಪುನೀತ್ ರಾಜ್‌ಕುಮಾರ್ ಹೊಸ ಗೆಟಪ್ಪಲ್ಲಿ ಕಾಶ್ಮೀರ ಸುತ್ತುತ್ತಿದ್ದಾರೆ.
ಫೆ.28ರಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಹಾಡು ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಮಾಡುವ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಈಗಾಗಲೇ ಹಿಮದ ಕಣಿಗಳ ನಾಡಿನಲ್ಲಿ ಬೀಡು ಬಿಟ್ಟಿದೆ.
ಚಿತ್ರತಂಡಕ್ಕೆ ನೃತ್ಯ ನಿರ್ದೇಶನಕ್ಕೆ ಎ ಹರ್ಷ, ಸಾಹಸ ದೃಶ್ಯಗಳ ನಿರ್ದೇಶನಕ್ಕೆ ವಿಜಯ್ ಚಿತ್ರತಂಡದ ಜತೆ ಕೈ ಜೋಡಿಸುತ್ತಿದ್ದಾರೆ.
ಈಗಾಗಲೇ ಚಿತ್ರತಂಡ ಕಾಶ್ಮೀರದ ಜನವಸತಿ ಪ್ರದೇಶಗಳಲ್ಲಿ ತಿರುಗಾಡುತ್ತಿದೆ.
ಆಸ್ಪತ್ರೆಗೆ ದಾಖಲಾಗಿರುವ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆದ ಮೇಲೆ ಪುನೀತ್ ರಾಜ್‌ಕುಮಾರ್ ಕೂಡ ‘ಜೇಮ್ಸ್’ ಚಿತ್ರತಂಡ ಸೇರಿಕೊಂಡಿದ್ದು, ಚಿತ್ರತಂಡದಲ್ಲಿ ಮತ್ತಷ್ಟುಉತ್ಸಾಹ ಹೆಚ್ಚಾಗಿದೆ.
ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಪ್ರಭಾಕರ್ ಹಾಗೂ ತೆಲುಗಿನ ಶ್ರೀಕಾಂತ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣದ ಚಿತ್ರವಿದು.