Puneeth Rajkumar ಫ್ಯಾಮಿಲಿ ಪ್ಯಾಕ್ ಸಕ್ಸಸ್ ಮೀಟ್‌ನಲ್ಲಿ ಅಪ್ಪು ನೆನೆದ ಚಿತ್ರತಂಡ
ಓಟಿಟಿ ವೀಕ್ಷಕರ ಮನಸ್ಸು ಗೆದ್ದೆ ಫ್ಯಾಮಿಲಿ ಫ್ಯಾಕ್ ಸಿನಿಮಾ. ಅಮೃತಾ ಲುಕ್, ರಂಗಾಯಣ ರಘು ಡೈಲಾಗ್‌ಗೆ ಎಲ್ಲರೂ ಫಿದಾ ಫಿದಾ ಫಿದಾ...
ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಫೆಬ್ರವರಿ 17ರಿಂದ ಫ್ಯಾಮಿಲಿ ಫ್ಯಾಕ್ ಸಿನಿಮಾ ಬಿಡುಗಡೆಯಾಗಿದೆ. ಭರ್ಜರಿ ವೀಕ್ಷಣೆ ಪಡೆಯುತ್ತಿದ್ದು, ತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.
‘ಅಪ್ಪು ಅವರಿಗೆ ಚಿತ್ರ ಥಿಯೇಟರ್‌ನಲ್ಲೇ ರಿಲೀಸ್ ಮಾಡಬೇಕೆಂದಿತ್ತು. ಆದರೆ ಆ ಹೊತ್ತಿಗೆ ಕೋವಿಡ್, ಲಾಕ್‌ಡೌನ್ ಆಯ್ತು. ಆಗ ಕೈ ಹಿಡಿದದ್ದು ಓಟಿಟಿ. ಅಲ್ಲಿ ತೆರೆಕಂಡ ಚಿತ್ರ ನಮ್ಮ ನಿರೀಕ್ಷೆಯನ್ನೂ ಮೀರಿ ಸಕ್ಸಸ್ ಆಗಿದೆ' ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ.
'ಬಹಳಷ್ಟು ಜನರ ಮೆಚ್ಚುಗೆ ನಮ್ಮವರೆಗೂ ಹರಿದುಬಂದಿದೆ’ ಎಂದು ಫ್ಯಾಮಿಲಿ ಪ್ಯಾಕ್ ಚಿತ್ರದ ನಿರ್ದೇಶಕ ಅರ್ಜುನ್ (Director Arjun) ಹೇಳಿದ್ದಾರೆ.
ಅಮೆಜಾನ್ ಓಟಿಟಿಯಲ್ಲಿ ಬಿಡುಗಡೆಯಾದ ‘ಫ್ಯಾಮಿಲಿ ಪ್ಯಾಕ್’ (Family Pack) ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಟ, ಸಹ ನಿರ್ಮಾಪಕ ಲಿಖಿತ್ ಶೆಟ್ಟಿ ಮಾತನಾಡಿ, ‘ನಮ್ಮ ಚಿತ್ರಕ್ಕೆ ಹೆಚ್ಚು ಪ್ರಚಾರ ಮಾಡಲಾಗಲಿಲ್ಲ. ಆದರೆ ಅಪ್ಪು ಅವರ ಆಶೀರ್ವಾದದಲ್ಲಿ ಚಿತ್ರ ಸಕ್ಸಸ್ ಆಗಿದೆ. ಈ ಚಿತ್ರ ಹಳ್ಳಿಗಳಿಗೂ ತಲುಪಬೇಕು ಅನ್ನುವ ಉದ್ದೇಶದಿಂದ 3 ತಿಂಗಳ ಬಳಿಕ ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಚಿಂತಿಸುತ್ತೇವೆ’ ಎಂದರು.
ಸಿಹಿ ಕಹಿ ಚಂದ್ರು, ನಟಿ ಶರ್ಮಿತಾ ಉಪಸ್ಥಿತರಿದ್ದರು. ಸಿನಿಮಾ ಚಿತ್ರೀಕರಣ ಮಾಡುವ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಪತ್ನಿ ಅಶ್ವಿನಿ ಸೆಟ್‌ಗೆ ಭೇಟಿ ಕೊಟ್ಟಾಗ ಸೆರೆ ಹಿಡಿದ ಫೋಟೋ ವೈರಲ್ ಆಗಿತ್ತು.