ಶಿವಣ್ಣ ಎನರ್ಜಿ ಸೂಪರ್; ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನಾರಾಯಣನ್
ಗೋಸ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನಟ. ಗೋಸ್ಟ್ ಸಿನಿಮಾದಲ್ಲಿ ಶಿವಣ್ಣ -ಜಯರಾಮ್ ಕಾಂಬಿನೇಷನ್...

ಬಾಲಿವುಡ್ ನಟ ಪ್ರಶಾಂತ್ ನಾರಾಯಣನ್ ಮರ್ಡರ್ 2, ಶ್ಯಾಡೋ ಆಫ್ ಟೈಮ್ಸ್, ವೈಸಾ ಭಿ ಹೋತಾ ಹೈ ಸೇರಿಂದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಎಮ್‌ಜಿ ಶ್ರೀನಿವಾಸ್ ನಿರ್ದೇಶನ ಮಾಡುತ್ತಿರುವ ಗೋಸ್ಟ್ ಸಿನಿಮಾ ಮೂಲಕ. 'ಭಾಷೆ ನನಗೆ ಸಮಸ್ಯೆ ಅಲ್ಲ, ಸಿನಿಮಾ ಸೆಟ್‌ಗಳಲ್ಲಿರುವುದೇ ಒಂದು ಖುಷಿ' ಎಂದು ಹೇಳಿದ್ದಾರೆ.
ಶಿವಣ್ಣ ಎನರ್ಜಿ ಸೂಪರ್ ಆಗಿದೆ ಅವರ ಸುತ್ತ ಇದ್ದರೆ ಸೆಟ್‌ಫುಲ್ ಎನರ್ಜಿಟಿಕ್ ಆಗಿರುತ್ತದೆ. ಅವರ ನಟನೆ ನನಗೆ ತುಂಬಾನೇ ಇಷ್ಟ. ಭಾಷೆ ವಿಚಾರದಲ್ಲಿ ನನಗೆ ತುಂಬಾನೇ ಸಹಾಯ ಮಾಡುತ್ತಾರೆ.
ಜಯರಾಮ್ ಸರ್ ಜೊತೆಗೂ ನನ್ನ ಸಂಬಂಧ ಹಾಗೆ ಇದೆ. ಅವರಿಬ್ಬರಿಂದ ಕಲಿಯುವುದು ತುಂಬಾ ಇದೆ. ಕಲಾವಿದನಾಗಿ ಸಿನಿಮಾ ಹೇಗೆ ಮೂಡಿ ಬರುತ್ತದೆ ಎಂದು ಮಾತ್ರ ಯೋಚನೆ ಮಾಡಬೇಕು ಇಂಡಸ್ಟ್ರಿ ಹೇಗೆ ವರ್ಕ್ ಮಾಡುತ್ತದೆ ಎಂದಲ್ಲ. ನಾನು ಸಿನಿಮಾಗಳಲ್ಲಿ 100% ಕೊಟ್ಟು ಮಾಡುತ್ತೀನಿ. ನನಗೆ ಎಲ್ಲೂ ವ್ಯತ್ಯಾಸ ಕಾಣಿಸುವುದಿಲ್ಲ' ಎಂದಿದ್ದರು ಪ್ರಶಾಂತ್.
'ಶ್ರೀನಿವಾಸ ಕಲ್ಯಾಣ', 'ಬೀರ್ ಬಲ್', 'ಓಲ್ಡ್ ಮಾಂಕ್' ಚಿತ್ರಗಳ ಖ್ಯಾತಿಯ ಶ್ರೀನಿ (Srini) ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸಂದೇಶ್ ನಾಗರಾಜ್ (Sandesh Nagaraj) ನಿರ್ಮಾಣ ಮಾಡುತ್ತಿದ್ದಾರೆ.
ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ಸಾಗುವ ಈ ಕತೆಯ ಇಡೀ ಸಿನಿಮಾ ಜೈಲಿನಲ್ಲಿ ನಡೆಯುತ್ತದೆ ಎಂಬುದು ಚಿತ್ರದ ಮತ್ತೊಂದು ಹೈಲೈಟ್. ಈಗ ಚಿತ್ರದ ಹೆಸರು ಬಹಿರಂಗ ಮಾಡಿರುವ ಶ್ರೀನಿ, ಕಲಾವಿದರನ್ನು ಸೀಕ್ರೆಟ್ ಆಗಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.