ಮಳೆ ಹುಡುಗಿಯ ರಗಡ್ ಲುಕ್..! ಸಂಹಾರಿಣಿಯಾಗಿ ಪೂಜಾ
ಮಳೆ ಹುಡುಗಿ ಪೂಜಾ ಗಾಂಧಿ ಎಲ್ಲಿದ್ದಾರೆ ಅಂತೀರಾ..? ರಗಡ್ ಲುಕ್‌ನಲ್ಲಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ.
ಇಂಥ ಪ್ರಶ್ನೆ ಗಾಂಧಿನಗರದಲ್ಲಿ ಯಾರಾದರು ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ.
ಆದರೆ, ಮಳೆ ಹುಡುಗಿ ಮಾತ್ರ ತಾನಿನ್ನೂ ಚಿತ್ರರಂಗದಲ್ಲಿ ಇದ್ದೇನೆ ಎನ್ನುವಂತೆ ‘ಸಂಹಾರಿಣಿ’ಯಾಗಿ ಸದ್ದು ಮಾಡಲು ಶುರು ಮಾಡಿದ್ದಾರೆ.
ತುಂಬಾ ದಿನಗಳ ವಿರಾಮದ ನಂತರ ಅವರ ನಟನೆಯ ‘ಸಂಹಾರಿಣಿ’ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ಶಬರೀಶ್ ಕೆವಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಜವಾಹರ್ ನಿರ್ದೇಶನ ಮಾಡಿದ್ದಾರೆ.
ಮುಂಗಾರು ಮಳೆ ಮೂಲಕ ಕನ್ನಡಿಗರ ಮನಸು ಗೆದ್ದಿದ್ದರು ನಟಿ ಪೂಜಾ ಗಾಂಧಿ.
ದಂಡುಪಾಳ್ಯ ಸಿನಿಮಾ ಮೂಲಕ ಸ್ವಲ್ಪ ಮಟ್ಟಿಗೆ ಸದ್ದು ಮಾಡಿದ್ದರು.
ಈಗ ಮತ್ತೆ ಮಾಸ್, ರಗಡ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ನಟಿ