Happy Birthday ಅವ್ಯಾನ್ ದೇವ್ ನಿಖಿಲ್: ಮರಿ ಮೊಮ್ಮಗನ ಜೊತೆ ದೇವೇಗೌಡ್ರು
ಪುತ್ರನ ಮೊದಲ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ ನಿಖಿಲ್ ಕುಮಾರಸ್ವಾಮಿ. ಮರಿ ಮೊಮ್ಮಗನನ್ನು ನೋಡಿ ದೊಡ್ಡ ಗೌಡರು ಖುಷ್....
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ ಸ್ವಾಮಿ ಮತ್ತು ರೇವತಿ ಪುತ್ರ ಅವ್ಯಾನ್ ದೇವ್ ಒಂದು ವರ್ಷಕ್ಕೆ ಕಾಲಿಟ್ಟಿದ್ದಾನೆ. ಅತಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.
ಮೊದಲು ಅನಿತಾ ಕುಮಾರಸ್ವಾಮಿ, ನಿಖಿಲ್, ದೇವತಿ ಮತ್ತು ಅವ್ಯಾನ್ ದೇವಿ ಗುಡಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆನಂತರ ಜನ ಸಾಮಾನ್ಯರನ್ನು ಭೇಟಿ ಮಾಡಿದ್ದಾರೆ.
ಹೌದು! ನಿಖಿಲ್ ನಿವಾಸದ ಬಳಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯದರ್ಶಿಗಳು ಅವ್ಯಾನ್ ದೇವ್‌ಗಾಗಿ ಸಣ್ಣ ಕೇಕ್ ಕಟಿಂಗ್ ಸೆಲೆಬ್ರೆಷನ್ ಹಮ್ಮಿಕೊಂಡಿದ್ದರು.
ಇದಾದ ಮೇಲೆ ಮನೆಯಲ್ಲಿ ತಾತ ಕುಮಾರಸ್ವಾಮಿ (H. D. Kumaraswamy) ಮತ್ತು ಅಜ್ಜಿ ಅನಿತಾ ಜೊತೆ ಅತಿ ಸರಳವಾಗಿ ಕೇಕ್ ಕಟ್ ಮಾಡಿಸಿದ್ದಾರೆ.
ಆನಂತರ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಅವರ ಮರಿ ಮೊಮ್ಮಗನನ್ನು ಆಶೀರ್ವದಿಸಿದ್ದಾರೆ. ಮರಿ ಮೊಮ್ಮಗನ ಜೊತೆಗೆ ಕೇಕ್ ಕಟ್ ಮಾಡಿ ಆಟವಾಡುತ್ತಿರುವು ಫೋಟೋ ವೈರಲ್ ಆಗುತ್ತಿದೆ.
ಶನಿವಾರ ಬೆಳಗ್ಗೆ ರಾಮನರದಲ್ಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನ ದೇಗುಲ ಮತತು ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಇಡೀ ಕುಟುಂಬ ವಿಶೇಷ ಪೂಜೆ ಮಾಡಿಸಿದ್ದಾರೆ.