ಮಾಲ್ಡೀವ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್, ಪೋಟೋಸ್
ಮಾಲ್ಡೀವ್ಸ್(ಫೆ. 18) ಲವ್ ಮಾಕ್ಟೇಲ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಾಲ್ಡೀವ್ಸ್ ನಿಂದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಸಹ ದಂಪತಿಗೆ ಮಧುಚಂದ್ರದ ಶುಭಾಶಯ ಹೇಳಿದ್ದಾರೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಫೆಬ್ರವರಿ 14ರಂದು ಸಪ್ತಪದಿ ತುಳಿದಿದ್ದಾರೆ.
ದಂಪತಿ ಲವ್ ಮಾಕ್ಟೇಲ್ -2 ಚಿತ್ರದ ನಡುವೆ ಬಿಡುವು ಮಾಡಿಕೊಂಡಿದ್ದಾರೆ.
ಕೊರೋನಾ ಕಾರಣ ಥಿಯೇಟರ್ ಲಭ್ಯವಿಲ್ಲದೆ ಲವ್ ಮಾಕ್ಟೇಲ್ ಒಟಿಟಿಯಲ್ಲಿ ಬಿಡುಗಡೆಯಾಗಿ ಜನ ಮೆಚ್ಚುಗೆ ಗಳಿಸಿಕೊಂಡಿತ್ತು.
ಭಾಗ ಎರಡರ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
ಜೋಡಿಯ ಫೋಟೋಕ್ಕೆ ಕ್ಯೂಟೆಸ್ಟ್ ಕಪಲ್ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.