- Home
- Entertainment
- Sandalwood
- ನೋಡಿದವರು ಏನಂತಾರೆ ಎನ್ನುತ್ತಲೇ ನಮ್ಮ ಕನಸು, ಗುರಿ ಬಗ್ಗೆ ಸಿನಿಮಾ ಮಾತನಾಡುತ್ತದೆ ಬಂದ ನವೀನ್ ಶಂಕರ್
ನೋಡಿದವರು ಏನಂತಾರೆ ಎನ್ನುತ್ತಲೇ ನಮ್ಮ ಕನಸು, ಗುರಿ ಬಗ್ಗೆ ಸಿನಿಮಾ ಮಾತನಾಡುತ್ತದೆ ಬಂದ ನವೀನ್ ಶಂಕರ್
ಇದು ಇಂಡಿಯನ್ ಮಿಡಲ್ ಕ್ಲಾಸ್ ಅನ್ನು ಒಂದು ಚೌಕಟ್ಟಿನೊಳಗೆ ಇಟ್ಟಿರುವ ಫ್ರೇಮ್. ಇದನ್ನು ನೋಡಿದಾಗ ನನ್ನ ಬದುಕಿನ ಕಥೆ, ನಾನು ಬೆಂಗಳೂರಿಗೆ ಬಂದ ದಿನಗಳು ಕಣ್ಮುಂದೆ ಬಂದವು. ನನ್ನ ಲೈಫ್ ನನ್ನದು.

ಭಾರತದ ಮಿಡಲ್ ಕ್ಲಾಸ್ ಮಂದಿಯೆಲ್ಲ ನೋಡಿದವರು ಏನಂತಾರೆ ಡೈಲಾಗ್ ಕೇಳಿ ಬೆಳೆದವರೇ ಆಗಿದ್ದಾರೆ. ಇದು ಇಂಡಿಯನ್ ಮಿಡಲ್ ಕ್ಲಾಸ್ ಅನ್ನು ಒಂದು ಚೌಕಟ್ಟಿನೊಳಗೆ ಇಟ್ಟಿರುವ ಫ್ರೇಮ್. ಇದನ್ನು ನೋಡಿದಾಗ ನನ್ನ ಬದುಕಿನ ಕಥೆ, ನಾನು ಬೆಂಗಳೂರಿಗೆ ಬಂದ ದಿನಗಳು ಕಣ್ಮುಂದೆ ಬಂದವು.
ನನ್ನ ಲೈಫ್ ನನ್ನದು. ಮುಂದೆ ನಾನು ಬದುಕುತ್ತೇನೆ ಎಂದು ಹೇಳಿಕೊಟ್ಟಿದ್ದು ಟೆಕ್ನಾಲಜಿ. ಆದರೆ ಈ ತಾಂತ್ರಿಕತೆ ನಮ್ಮನ್ನು ಒಣಗಿಸುತ್ತದೆ. ಸದಾ ಜೀವಂತಿಕೆಯಿಂದಿರಲು ಕಲೆಯ ಸಂಪರ್ಕ ಬೇಕೇ ಬೇಕು.
ಹೀಗಂದಿದ್ದು ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ. ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಸಿನಿಮಾ ಟ್ರೇಲರ್ ಅನ್ನು ಜೋಗಿ ಹಾಗೂ ಸಾಧುಕೋಕಿಲ ಬಿಡುಗಡೆ ಮಾಡಿದರು.
ಈ ಚಿತ್ರ ಜ.31ಕ್ಕೆ ತೆರೆಗೆ ಬರಲಿದೆ. ಸಾಧುಕೋಕಿಲ, ‘ಈ ಸಿನಿಮಾದ ಟ್ರೇಲರ್ ನೋಡಿ ಎಮೋಷನಲ್ ಆದೆ. ಇದು ಕ್ರಿಯೇಟಿವ್ ಜಾನರಾದ ಸಿನಿಮಾ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ದೊರಕಬೇಕು’ ಎಂದರು.
ನಾಯಕ ನವೀನ್ ಶಂಕರ್, ‘ನಮ್ಮ ಕನಸು, ಗುರಿ ಬಗ್ಗೆ ಸಿನಿಮಾ ಮಾತನಾಡುತ್ತದೆ. ಒಂದು ಕಿರು ಕಾದಂಬರಿ ಓದಿದ ಅನುಭವವನ್ನು ಈ ಚಿತ್ರ ಕೊಡುತ್ತದೆ’ ಎಂದರು.
ನಿರ್ದೇಶಕ ಕುಲದೀಪ್ ಕರಿಯಪ್ಪ, ‘ನಾನು ಬರೆಯಬೇಕಾದರೆ ಪಾತ್ರ ಹೀಗೆ ಬರಬೇಕು. ಹಾಗೇ ಬರಬೇಕು ಎಂಬ ಅಂದಾಜು ಇರುತ್ತದೆ. ಅದಕ್ಕೆ ಕಲಾವಿದರು ಜೀವ ತುಂಬಿದ್ದಾರೆ. ಎಲ್ಲರಿಂದ ಈ ಸಿನಿಮಾವಾಗಿದೆ’ ಎಂದರು. ಅಪೂರ್ವ ಭಾರದ್ವಾಜ್ ಈ ಸಿನಿಮಾದ ನಾಯಕಿ. ನಾಗೇಶ್ ಗೋಪಾಲ್ ನಿರ್ಮಾಪಕರು.