ಮಿಸ್ ಮಾಡದೇ ನೋಡಲೇಬೇಕಾದ ಅಮೃತಧಾರೆಯ ಭೂಮಿಕಾ ಆಗಿ ಮನ ಗೆದ್ದ ಛಾಯಾ ಸಿಂಗ್ ಸಿನಿಮಾಗಳು
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಗಿ ನಟಿಸುತ್ತಿರುವ ನಟಿ ಛಾಯಾ ಸಿಂಗ್ ಹುಟ್ಟುಹಬ್ಬವನ್ನು ಮೇ 16 ರಂದು ಆಚರಿಸಿಕೊಳ್ಳುತ್ತಿದ್ದು, ಈ ದಿನ ಅವರು ನಟಿಸಿರುವ ಜನಪ್ರಿಯ ಸಿನಿಮಾಗಳ ಬಗ್ಗೆ ಮಾಹಿತಿ ತಿಳಿಯೋಣ.

ಛಾಯಾ ಸಿಂಗ್ (Chaya Singh) ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ಅದ್ಭುತವಾದ ನಟಿ. ಮುನ್ನುಡಿಯಿಂದ ಹಿಡಿದು, ಭೈರತಿ ರಣಗಲ್ ವರೆಗೂ ತಮ್ಮ ನಟನೆಯಿಂದ ಮೋಡಿ ಮಾಡಿದ ಚೆಲುವೆ ಛಾಯಾ ಸಿಂಗ್ ಇಂದು ಮೇ 16ರಂದು ತಮ್ಮ 44 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ರಾಜಪೂತ ಕುಟುಂಬದಲ್ಲಿ ಹುಟ್ಟಿರುವ ಛಾಯಾ ಸಿಂಗ್ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕರ್ನಾಟಕದಲ್ಲೇ. ಇವರು ಕನ್ನಡ, ತಮಿಳು ಸೇರಿ, ಮಲಯಾಲಂ, ತೆಲುಗು ಹಾಗೂ ಭೋಜ್ ಪುರಿ ಸಿನಿಮಾಗಳು ಹಾಗೂ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ(Amruthadhare serial) ಭೂಮಿಕಾ ಪಾತ್ರದ ಮೂಲಕ ಜನಮನ ಗೆದ್ದಿದ್ದಾರೆ. ಇಲ್ಲಿದೆ ನೋಡಿ ಛಾಯಾ ಸಿಂಗ್ ಅಭಿನಯದ ನೀವು ಮಿಸ್ ಮಾಡದೇ ನೋಡಲೇಬೇಕಾದ ಸಿನಿಮಾಗಳು.
ಮುನ್ನುಡಿ : ಇದು ಪಿ. ಶೇಷಾದ್ರಿ ( P Sheshadri)ನಿರ್ದೇಶನದ ಸಿನಿಮಾ. ಈ ಸಿನಿಮಾವನ್ನು ಬೊಲ್ವಾರ್ ಮೊಹಮ್ಮದ್ ಕುಂಝಿಯವರ ಮುತ್ತುಛೇರಾ ಎನ್ನುವ ಸಣ್ಣಕಥೆಯಿಂದ ಪ್ರೇರಿತವಾಗಿ ನಿರ್ದೇಶನ ಮಾಡಲಾಗಿದೆ. ಈ ಸಿನಿಮಾ ಪುರ್ತಿಯಾಗಿ ಇಸ್ಲಾಂ ಧರ್ಮದ ಆಚರಣೆ, ಸಂಪ್ರದಾಯ, ತಲಾಖ್ ಕುರಿತಾಗಿದೆ.
ತುಂಟಾಟ : 2002ರಲ್ಲಿ ಬಿಡುಗಡೆಯಾದ ತುಂಟಾಟ ಸಿನಿಮಾವು ಆ ಕಾಲದಲ್ಲಿ ಯುವಜನತೆಯಲ್ಲಿ ಕ್ರೇಜ್ ಸೃಷ್ಟಿಸಿತ್ತು. ಇದು ಸ್ನೇಹ ಹಾಗೂ ಪ್ರೀತಿಯ ಕಥೆಯನ್ನು ಹೊಂದಿರುವ ಸಿನಿಮಾ. ಈ ಚಿತ್ರದಲ್ಲಿ ಅನಿರುದ್ಧ, ಛಾಯಾಸಿಂಗ್ ಜೊತೆಗೆ ರೇಖಾ ನಟಿಸಿದ್ದರು.
ತಿರುಡಾ ತಿರುಡಿ : ಇದು ತಮಿಳು ಸಿನಿಮಾವಾಗಿದ್ದು, ಛಾಯಾ ಸಿಂಗ್ ನಟಿಸಿರುವ ಜನಪ್ರಿಯ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಧನುಶ್ ಗೆ (Dhanush) ನಾಯಕಿಯಾಗಿ ಛಾಯಾ ಸಿಂಗ್ ನಟಿಸಿದ್ದರು. ಸಿನಿಮಾದ ಮನ್ಮದ ರಾಸ ಹಾಡು ಇವತ್ತಿಗೂ ಕ್ರೇಜ್ ಸೃಷ್ಟಿಸುತ್ತದೆ.
ಜೈ ಸೂರ್ಯ: ಅರ್ಜುನ್ ಸರ್ಜಾ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಛಾಯಾ ಸಿಂಗ್ ಹಾಗೂ ಲೈಲಾ ಇಬ್ಬರು ನಾಯಕಿಯರು. ತದ್ವಿರುದ್ಧ ಪಾತ್ರಗಳ ಕಥೆಯನ್ನು ಹೊಂದಿರುವ ಸುಂದರ ಸಿನಿಮಾ ಇದಾಗಿತ್ತು.
ಆನಂದ ಪುರತ್ತ್ ವೀಡು : ಇದೊಂದು ಸೂಪರ್ ನ್ಯಾಚುರಲ್ ಮಿಸ್ಟ್ರಿ (super natural mystry)ಸಿನಿಮಾ ಆಗಿದೆ. ಇದು ಒಂದು ಪುರಾತನ ಮನೆಗೆ ಬರುವಂತಹ ಫ್ಯಾಮಿಲಿ, ಅಲ್ಲಿ ಯಾವೆಲ್ಲಾ ರೀತಿಯಲ್ಲಿ ಆತ್ಮಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತೆ. ಕೊನೆಗೆ ಅದೇ ಆತ್ಮಗಳು ಅವರನ್ನು ಸಮಸ್ಯೆಯಿಂದ ಹೇಗೆ ಹೊರ ತರುತ್ತೆ ಅನ್ನೋದು ಕಥೆ.
ಮಫ್ತಿ : ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಮ್ದು ಮಫ್ತಿ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿ ಛಾಯಾ ಸಿಂಗ್ ನಟಿಸಿದ್ದರು. ಇದರಲ್ಲಿ ಛಾಯಾ ಸಿಂಗ್ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದರು.
ಲಿಲ್ಲಿ ರಾಣಿ : ಇದು ವೇಶ್ಯೆಯೊಬ್ಬಳ ಕಥೆಯಾಗಿದ್ದು, ತನ್ನ ಮಗುವಿನ ಅಪ್ಪ ಯಾರು ಎಂದು ಹುಡುಕಿ ಹೊರಟ ರಾಣಿಗೆ ಮಗುವಿನ ಅಪ್ಪ ಸಿಗುವನೋ ಅನ್ನೋದು ಕಥೆ.
ಭೈರಾತಿ ರಣಗಲ್ : ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ. ಇದು ಮಫ್ತಿ ಸಿನಿಮಾದಲ್ಲಿ ಮೊದಲ ಭಾಗವಾಗಿದ್ದು, ಈ ಸಿನಿಮಾದಲ್ಲಿ (Bhairathi ranagal) ಮಫ್ತಿಯಲ್ಲಿ ತೋರಿಸಿದ ಅಣ್ಣ -ತಂಗಿಯರ ಕೋಪ ಆರಂಭವಾಗಿದ್ದು ಹೇಗೆ ಅನ್ನೋದನ್ನು ತಿಳಿಸಲಾಗಿದೆ. ಇದರಲ್ಲೂ ಛಾಯಾ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ.