- Home
- Entertainment
- Sandalwood
- 'ಮೋಡ ಕವಿದ ವಾತಾವರಣ'ದಲ್ಲಿ ಸಿಂಪಲ್ ಸುನಿ ಜೊತೆ ಕಾಣಿಸಿಕೊಂಡ ಮೋಕ್ಷಾ ಕುಶಾಲ್: ಯಾಕೆ?
'ಮೋಡ ಕವಿದ ವಾತಾವರಣ'ದಲ್ಲಿ ಸಿಂಪಲ್ ಸುನಿ ಜೊತೆ ಕಾಣಿಸಿಕೊಂಡ ಮೋಕ್ಷಾ ಕುಶಾಲ್: ಯಾಕೆ?
ಸ್ಯಾಂಡಲ್‌ವುಡ್‌ನ ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ಕ್ಕೆ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ಕ್ಕೆ ಹೊಸ ನಾಯಕನ ಎಂಟ್ರಿಯಾಗಿದೆ. ಹೆಸರು ಶೀಲಮ್. ಈ ಚಿತ್ರದಲ್ಲಿ ಮೋಕ್ಷಾ ಕುಶಾಲ್ ನಾಯಕಿಯಾಗಿ ನಟಿಸಿದ್ದಾರೆ.
ಶೀಲಮ್ ಕೆಲ ಸಮಯದಿಂದ ನಿರ್ದೇಶಕ ಸುನಿ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ವಿವರ ನೀಡಿದ ನಿರ್ದೇಶಕ ಸುನಿ, ‘ಮೋಡ ಕವಿದ ವಾತಾವರಣ ಸಿನಿಮಾದ ಶೂಟಿಂಗ್ ಇಂದು (ಜು.11) ಸಂಪೂರ್ಣವಾಗುತ್ತಿದೆ. ರೀರೆಕಾರ್ಡಿಂಗ್ ಕೆಲಸಗಳೆಲ್ಲ ಬಹುತೇಕ ಮುಗಿದು ಚಿತ್ರದ ರಿಲೀಸ್‌ಗೆ ತಯಾರಿ ನಡೆಯುತ್ತಿದೆ.
ನಾಯಕ ಶೀಲಮ್ ಸಿನಿಮಾ ಪ್ರೀತಿ ಕಂಡು ಈ ಸಿನಿಮಾಕ್ಕೆ ಅವರನ್ನೇ ಹೀರೋ ಮಾಡಲು ನಿರ್ಧರಿಸಿದೆ. ಇದೊಂದು ಭಾವನಾತ್ಮಕ ಚಿತ್ರ’ ಎಂದಿದ್ದಾರೆ. ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ.
ಇನ್ನು ಆದಿ ಪುರಾಣ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೂರ್ಗ್ ಬ್ಯೂಟಿ ಮೋಕ್ಷಾ, ನಂತರ ನವರತ್ನ ಸಿನಿಮಾದಲ್ಲಿ ವೈಲ್ಡ್ ಲೈಫ್ ಫೋಟೊಗ್ರಾಫರ್ ಆಗಿ ಮಿಂಚಿದ್ದರು, ಬಳಿಕ ಡಾಲಿ ಧನಂಜಯ್ ನಾಯಕಿಯಾಗಿ ಕೋಟಿ ಸಿನಿಮಾದಲ್ಲಿ ನಟಿಸಿದ್ದಾರೆ.
ಇದಲ್ಲದೇ ನಟಿ ಆಯನ ಸಿನಿಮಾದಲ್ಲೂ ನಟಿಸಿದ್ದಾರೆ. ಮಾಡೆಲ್ ಆಗಿರುವ ಮೋಕ್ಷಾ ಹಲವು ಫ್ಯಾಷನ್ ಶೋ, ಈವೆಂಟ್ ಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಜೊತೆಗೆ ಮಾಡೆಲ್ ಆಗಿ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ.