ಹುಟ್ಟುಹಬ್ಬದ ಸಂಭ್ರಮದಲ್ಲಿ ಪತಿಯನ್ನು ಮಿಸ್ ಮಾಡಿಕೊಂಡ ಮೇಘನಾ; ಚಿರು ಫೋಟೋ ಹಂಚಿಕೊಂಡ ನಟಿ
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಇಂದು (ಮೇ 3) ಹುಟ್ಟುಹಬ್ಬ ಸಂಭ್ರಮ. ಹುಟ್ಟುಹಬ್ಬದ ಈ ಸಮಯದಲ್ಲಿ ಮೇಘನಾ ಪತಿ ಚಿರಂಜೀವಿ ಫೋಟೋ ಶೇರ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಇಂದು (ಮೇ 3) ಹುಟ್ಟುಹಬ್ಬ ಸಂಭ್ರಮ. ಮೇಘನಾಗೆ ಅಭಿಮಾನಿಗಳು ಮತ್ತು ಸಿನಿಮಾಗಣ್ಯರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.
ಮೇಘನಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಪತಿ ಚಿರಂಜೀವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರು ಶೇರ್ ಮಾಡಿರುವ ಫೋಟೋನೆ ಸಾಕ್ಷಿ. ಪತಿ ಜೊತೆ ಪ್ರವಾಸಕ್ಕೆ ತೆರಳಿದ್ದ ಫೋಟೋವನ್ನು ಮೇಘನಾ ಶೇರ್ ಮಾಡಿದ್ದಾರೆ.
ನೀರಿನ ಬ್ಯಾಕ್‌ಡ್ರಾಪ್‌ನಲ್ಲಿ ಪತಿ ಚಿರು ಜೊತೆ ಪೋಸ್ ನೀಡಿರುವ ಫೋಟೋವನ್ನು ಮೇಘನಾ ಶೇರ್ ಮಾಡಿದ್ದಾರೆ. ಮೇಘನಾ ಫೋಟೋಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಚಿರಂಜೀವಿ ಸರ್ಜಾ 2020ರಲ್ಲಿ ನಿಧನರಾದರು. ಚಿರು ಸಾವು ಮೇಘನಾ ರಾಜ್ ಮತ್ತು ಅವರ ಕುಟುಂಭಕ್ಕೆ ದೊಡ್ಡ ಆಘಾತ ತಂದಿತ್ತು. ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಮೇಘನಾ ಬದುಕಿಗೆ ರಾಯನ್ ರಾಜ್ ಸರ್ಜಾ ಸಂತೋಷ ಹೊತ್ತು ತಂದಿದ್ದಾನೆ.
ಮೇಘನಾ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ತತ್ಸಮ ತದ್ಭವ ಸಿನಿಮಾ ಅನೌನ್ಸ್ ಮಾಡಿದ್ದರು. ಇಂದು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ಈ ಸಿನಿಮಾದಲ್ಲಿ ಮೇಘನಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಮುಕ್ತಾಯವಾಗಿದ್ದು ರಿಲೀಸ್ಗೆ ಸಿದ್ಧವಾಗುತ್ತಿದೆ.
ತತ್ಸಮ ತದ್ಭವ ಸಿನಿಮಾಗೆ ವಿಶಾಲ್ ಅತ್ರೇಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಿನಿಮಾಗಿದೆ. ಸದ್ಯದಲ್ಲೇ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.