ಐಷಾರಮಿ ಹೋಟೆಲ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ಸರ್ಜಾ ಕುಟುಂಬದ ಸೊಸೆಯರು; ಫೋಟೋ ವೈರಲ್
ವೈರಲ್ ಆಯ್ತು ಮೇಘನಾ ರಾಜ್- ಪ್ರೇರಣಾ ಫೋಟೋ. ಸರ್ಜಾ ಕುಟುಂಬದ ಸೊಸೆಯಂದಿರು ಒಟ್ಟಿಗೆ ಇರೋದು ನೋಡಿ ಅಭಿಮಾನಿಗಳು ಶಾಕ್......
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಪ್ರೇರಣಾ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಐಷಾರಾಮಿ ಹೋಟೆಲ್/ಕೆಫೆಯಲ್ಲಿ ಮೇಘನಾ ರಾಜ್ ಮತ್ತು ಪ್ರೇರಣಾ ಸಮಯ ಕಳೆದಿದ್ದಾರೆ. ಮಕ್ಕಳಿಲ್ಲದೆ ಇಬ್ಬರೂ ಟೆನ್ಶನ್ ಫ್ರೀ ಆಗಿ ಹರಟೆ ಹೊಡೆದಿದ್ದಾರೆ.
ಹೋಟೆಲ್‌ನಲ್ಲಿ ಸೇವಿಸಿರುವ ಯಮ್ಮಿ ಯಮ್ಮಿ ಕೇಕ್ ಫೋಟೋವನ್ನು ಮೇಘನಾ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಪ್ರೇರಣ ಸಹೋದರಿ ಆಗಿರುವ ಪ್ರಾರ್ಥನಾಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ.
ಕೆಂಪು ಟೀ-ಶರ್ಟ್‌ಗೆ ಬ್ಲಾಕ್ ಪ್ಯಾಂಟ್ ಮತ್ತು ಬ್ಲಾಕ್ ಜಾಕೆಟ್‌ನಲ್ಲಿ ಮೇಘನಾ ಕಾಣಿಸಿಕೊಂಡರೆ, ಫುಲ್ ಬ್ಲಾಕ್ ಆಂಡ್ ಬ್ಲಾಕ್ ಔಟ್‌ಫಿಟ್‌ನಲ್ಲಿ ಪ್ರೇರಣಾ ಮಿಂಚಿದ್ದಾರೆ. ಇಬ್ಬರು ಒಟ್ಟಿಗೆ ಇರುವ ಫೋಟೋ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಪ್ರೇರಣಾ ಕೆಲಸ ಮಾಡುತ್ತಿದ್ದಾರೆ. ಪುತ್ರಿ ರುದ್ರಾಕ್ಷಿ ಮತ್ತು ಪುತ್ರ ಹಯಗ್ರೀವ ಹುಟ್ಟಿದ ಮೇಲೆ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದರು.
ರಾಯನ್‌ಗೆ ವರ್ಷ ತುಂಬುತ್ತಿದ್ದಂತೆ ಮೇಘನಾ ರಾಜ್ ಕೂಡ ಕಮ್ ಬ್ಯಾಕ್ ಮಾಡಿದ್ದರು. ರಿಯಾಲಿಟಿ ಶೋಗಳಲ್ಲಿ ತೀರ್ಪು ನೀಡುತ್ತಾ ಹಾಗೆ ಬಿಗ್ ಪ್ರಾಜೆಕ್ಟ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ.
ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆಯಾಗಿ ಎಂಟ್ರಿ ಕೊಟ್ಟ ಮರು ದಿನವೇ ಮೇಘನಾ ಮತ್ತು ಪ್ರೇರಣಾ ಸುತ್ತಾಡಲು ಹೊರ ಹೋಗಿದ್ದರು. ತುಂಬಾ ಹಿಂದೆ ಈ ಫೋಟೋ ಕೂಡ ಸಖತ್ ವೈರಲ್ ಆಗಿತ್ತು.