- Home
- Entertainment
- Sandalwood
- ಹುಡುಗರು ಮದ್ವೆಗೆ ಹೋಗೋದು 'ಹೆಣ್ಣು' ಮತ್ತು 'ಎಣ್ಣೆ'ಗಾಗಿ... Megha Shetty ಹೇಳ್ತಿರೋದು ನಿಜಾನ?
ಹುಡುಗರು ಮದ್ವೆಗೆ ಹೋಗೋದು 'ಹೆಣ್ಣು' ಮತ್ತು 'ಎಣ್ಣೆ'ಗಾಗಿ... Megha Shetty ಹೇಳ್ತಿರೋದು ನಿಜಾನ?
Megha Shetty: ಆಪರೇಷನ್ ಲಂಡನ್ ಕೆಫೆ ಮೂಲಕ ಸದ್ದು ಮಾಡುತ್ತಿರುವ ನಟಿ ಮೇಘಾ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹುಡುಗರು ಮದುವೆಗೆ ಹೋಗೋದು ಈ ಐದು ಕಾರಣಗಳಿಗಾಗಿ ಎಂದು ಹೇಳಿದ್ದಾರೆ. ಅದರಲ್ಲಿ ಹೆಣ್ಣು ಮತ್ತು ಎಣ್ಣೆ ಕೂಡ ಸೇರಿದೆ. ಅಷ್ಟಕ್ಕೂ ನಟಿ ಏನು ಹೇಳಿದ್ರು ನೋಡಿ.

ಮೇಘಾ ಶೆಟ್ಟಿ
ಚಂದನವನದಲ್ಲಿ ನಟಿಯಾಗಿ ಹಾಗೂ ಕನ್ನಡ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿರುವ ಮೇಘಾ ಶೆಟ್ಟಿ ಇದೀಗ ಆಪರೇಷನ್ ಲಂಡನ್ ಕೆಫೆ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.
ಸಂದರ್ಶನದಲ್ಲಿ ಮೇಘಾ ಶೆಟ್ಟಿ ಹೇಳಿದ್ದೇನು?
ಸಿನಿಮಾದ ಸಂದರ್ಶನವೊಂದರಲ್ಲಿ ನಿರೂಪಕರು ಮೇಘಾ ಶೆಟ್ಟಿ ಬಳಿ ತಮಾಷೆಯಾಗಿ ಪ್ರಶ್ನೆಗಳನ್ನು ಕೇಳಿದ್ದು, ಆವಾಗ ನಿಮ್ಮ ಪ್ರಕಾರ ಹುಡುಗರು ಸಾಮಾನ್ಯವಾಗಿ ಮದುವೆಗೆ ಯಾಕೆ ಹೋಗುತ್ತಾರೆ ಎಂದು ಕೇಳಿದ್ದಾರೆ. ಅದಕ್ಕೆ ಮೇಘಾ ಶೆಟ್ಟಿ ತಮಾಷೆಯಾಗಿಯೇ ಉತ್ತರ ನೀಡಿದ್ದಾರೆ.
ಹೆಣ್ಣು ಮತ್ತು ಎಣ್ಣೆಗಾಗಿ
ನಿರೂಪಕರ ಪ್ರಶ್ನೆಗೆ ಉತ್ತರಿಸಿದ ಮೇಘಾ ಶೆಟ್ಟಿ, ಹುಡುಗರು ಮುಖ್ಯವಾಗಿ ಮದುವೆಗೆ ಹೋಗಲು ಕಾರಣ ಅಂದ್ರೆ ಮೊದಲನೇಯದಾಗಿ ಹುಡುಗಿಯರನ್ನು ನೋಡೋದಕ್ಕೆ, ಎರಡನೇಯದಾಗಿ ಊಟ ಮಾಡಲು ಮೂರನೇಯದಾಗಿ ಎಣ್ಣೆಗಾಗಿ ಎಂದಿದ್ದಾರೆ.
ಮದುವೆ ಸೆಟ್ ಮಾಡೋಕೆ
ಅಷ್ಟೇ ಅಲ್ಲ ಸಖತ್ ಆಗಿ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡೋಕೆ ಮದ್ವೆಗೆ ಹೋಗ್ತಾರಂತೆ. ಅದಲ್ಲಂತೆ ನಾನು ಮದುವೆ ಆಗಲ್ಲ ಆಗಲ್ಲ ಅಂತ ಹೇಳುತ್ತಿದ್ದ ಹುಡುಗರನ್ನು ಗೊಳೊಯ್ದು, ಮಚ್ಚಾ ನೀನು ಬಿದ್ದೋಗ್ಬಿಟ್ಯಲ್ಲೋ ಎಂದು ಕಾಟ ಕೊಡೋದಕ್ಕೆ ಮದುವೆಗೆ ಹೋಗ್ತಾರಂತೆ ಎಂದು ತಮಾಷೆಯಾಗಿ ಮೇಘಾ ಉತ್ತರಿಸಿದ್ದಾರೆ.
OLC ಸಿನಿಮಾ
ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ OLC (ಆಪರೇಶನ್ ಲಂಡನ್ ಕೆಫೆ) ಸಿನಿಮಾದಲ್ಲಿ ಮೇಘಾ ಶೆಟ್ಟಿ ಬಜಾರಿ ಹುಡುಗಿಯಾಗಿ ನಟಿಸಿದ್ದಾರೆ. ಸಡಗರ ರಾಘವೇಂದ್ರ ಅವರ ನಿರ್ದೇಶನ, ಕವೀಶ್ ಶೆಟ್ಟಿ ಕಥೆ ಬರೆದಿರುವ ಸಿನಿಮಾ ಇದಾಗಿ. ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು, ಸಿನಿರಸಿಕರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ.
ಮೇಘಾ ಶೆಟ್ಟಿ ನಟಿಸಿದ ಸಿನಿಮಾಗಳು
ಟ್ರಿಪಲ್ ರೈಡಿಂಗ್, ದಿಲ್ ಪಸಂದ್, ಕೈವಾ, ಆಫ್ಟರ್ ಆಪರೇಶನ್ ಲಂಡನ್ ಕೆಫೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಚೀತಾ, ಗ್ರಾಮಾಯಣ ಸಿನಿಮಾ ಬಿಡುಗಡೆಗೆ ಬಾಕಿ ಇದೆ. .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

