ಗಂಡನ ಜೊತೆ ‘ಬಾಲಿ’ ಎಂಜಾಯ್ ಮಾಡೋದು ಬಿಟ್ಟು, ಅಡುಗೆ ಮನೆ ಸೇರ್ಕೊಂಡ್ರ ಟಗರು ಪುಟ್ಟಿ!
ಸ್ಯಾಂಡಲ್‌ವುಡ್‌ನಲ್ಲಿ ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದ ನಟಿ ಮಾನ್ವಿತಾ ಕಾಮತ್ ಗಂಡನ ಜೊತೆ ಬಾಲಿಗೆ ತೆರಳಿದ್ದ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ಮುಗಿಸಿಕೊಂಡು ಸ್ವಲ್ಪ ಸಮಯದ ಬಳಿಕ ಬಾಲಿಗೆ ಹನಿಮೂನಿಗಾಗಿ ತೆರಳಿದ್ದ ಸ್ಯಾಂಡಲ್‌ವುಡ್ ಟಗರು ಪುಟ್ಟಿ ಮಾನ್ವಿತಾ ಕಾಮತ್ (Manvitha Kamath), ಇದೀಗ ಬಾಲಿಯಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಗಂಡನ ಜೊತೆಗಿನ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿರುವ ನಟಿ ಅದರ ಜೊತೆಗೆ ತಾವು ಅಡುಗೆ ಮನೆಯಲ್ಲಿ ಕುಳಿತು ಏನನ್ನೋ ಮಾಡುತ್ತಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ್ರೆ ಅಯ್ಯೋ ಗಂಡನ ಜೊತೆ ಬಾಲಿಗೆ ಹೋಗಿ ಜಾಲಿ ಮಾಡೋದು ಬಿಟ್ಟು, ಇದೇನು ಅಡುಗೆ ಮನೆ ಸೇರ್ಕೊಂಡಿದ್ದಾರೆ ಎಂದು ಅನಿಸದೇ ಇರದು.
ವಿಷ್ಯ ಏನಂದ್ರೆ ನಟಿ ಮಾನ್ವಿತಾ ಬಾಲಿಯಲ್ಲಿರುವ (Bali) ಕಾಫಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಸ್ವತಃ ತಾವೇ ನಿಂತು ಕಾಫಿ ಬೀಜ, ಹುರಿದು ಕುಟ್ಟಿ ಪುಡಿ ಮಾಡಿ, ಕಾಫಿ ಮಾಡೋ ಅನುಭವವನ್ನು ಪಡೆಯಬಹುದು. ಮಾನ್ವಿತಾ ಮಾಡಿದ್ದು ಕೂಡ ಅದೇ.
ಕಾಫಿಯನ್ನು ತಯಾರಿಸುವ ಪ್ರತಿಯೊಂದೂ ಅನುಭವವನ್ನು ಎಂಜಾಯ್ ಮಾಡುತ್ತಿರುವ ಮಾನ್ವಿತಾ, ಇದರ ಜೊತೆ ತಮ್ಮ ಮಲೆನಾಡಿನ (Malnadu) ಹಳೆಯ ದಿನಗಳನ್ನು ಸಹ ನೆನಪು ಮಾಡಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮಾನ್ವಿತಾ, ಬಾಲಿಗೆ ಹೋಗಿ ಕಾಫಿ ರೋಸ್ಟ್ (roasting coffee) ಮಾಡೋದು ಬೇರೆ ರೀತಿಯ ಅನುಭವ ನೀಡುತ್ತೆ. ಕಾಫಿ ನಾಡು ಮಲೆನಾಡಿನಿಂದ ಬಂದಿರೋ ನನ್ನ ನರನಾಡಿಯಲ್ಲೂ ಕಾಫಿಯೇ ಹರಿಯುತ್ತೆ ಎಂದಿದ್ದಾರೆ.
ಅಷ್ಟೇ ಅಲ್ಲ ಬಾಲಿಯಲ್ಲಿ ಸೆಟ್ ಮಾಡಿರುವ ಈ ಕಿಚನ್ ಸೆಟಪ್, ಹಳೆ ಕಾಲದ ಮಲೆನಾಡಿನ ಅಡುಗೆಮನೆಯಂತೆಯೇ ಕಾಣಿಸುತ್ತಿದೆ. ಇಲ್ಲಿ ಖಂಡಿತಾ ನೀವು ಉತ್ತಮ ಅನುಭವ ಪಡೆಯುವ ಮೂಲಕ ಹಳೆ ನೆನಪುಗಳನ್ನ ಮೆಲುಕು ಹಾಕಬಹುದು. ಬೇರೆ ಬೇರೆ ತಾಣಗಳು ನಮ್ಮ ಜೊತೆ ನಮ್ಮ ನೆನಪಿನ ಜೊತೆ ಹೇಗೆ ಕನೆಕ್ಟ್ ಆಗುತ್ತವೆ ಅಲ್ವಾ ಎಂದಿದ್ದಾರೆ ಮಾನ್ವಿತಾ ಕಾಮತ್.
ಮದುವೆಯಾದ ಬಳಿಕ ಮೊದಲನೇ ಸದ ಪತಿ ಅರುಣ್ (Arun) ಜೊತೆ ಬಾಲಿಗೆ ತೆರಳಿರುವ ನಟಿ ಮಾನ್ವಿತಾ, ಅಲ್ಲಿನ ಬೇರೆ ಬೇರೆ ತಾಣಗಳು, ಅಲ್ಲಿನ ಸಂಸ್ಕೃತಿ, ಸ್ಥಳೀಯ ಜನರು, ಆಚರಣೆ ಜೊತೆ ಬೆರೆಯುತ್ತಾ ಎಂಜಾಯ್ ಮಾಡ್ತಿದ್ದಾರೆ.
ಇನ್ನು ಸಿನಿಮಾಗಳ ಬಗ್ಗೆ ಹೇಳೋದಾದ್ರೆ, ಮಾನ್ವಿತಾ ಕಾಮತ್ ಅಭಿನಯದ ರಾಜಸ್ಥಾನ ಡೈರೀಸ್ ಶೂಟಿಂಗ್ ಮುಗಿದಿದ್ದು, ಸಿನಿಮಾ ತೆರೆ ಕಾಣಲು ಕಾಯ್ತಿದ್ದಾರೆ. ಇದಲ್ಲದೆ ಇವರ ಹ್ಯಾಪಿಲಿ ಮ್ಯಾರೀಡ್ (happily married) ಚಿತ್ರದ ಶೂಟಿಂಗ್ ಕೂಡ ಪೂರ್ಣ ಆಗಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಅನ್ನೋದು ಮಾತ್ರ ಇನ್ನಷ್ಟೇ ತಿಳಿದು ಬರಬೇಕಿದೆ.