ಅಂಬಿ-ವಿಷ್ಣು ಬಾಂಧವ್ಯಕ್ಕೆ ಮಸಿ ಬಳಿಯಬೇಡಿ; ಸಂಸದೆ ಸುಮಲತಾ ಮನವಿ!

First Published 30, Jun 2020, 5:05 PM

ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಶ್‌ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಸರ್ಕಾರ 5 ಕೋಟಿ ರೂಪಾಯಿ ಘೋಷಣೆ ಮಾಡಿದೆ. ಈ ಸಮಯದಲ್ಲಿ ನೆಟ್ಟಿಗರು ವಿಷ್ಣು ಸ್ಮಾರಕದ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಸ್ವತಃ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಈ ಬಗ್ಗೆ  ಸ್ಪಷ್ಟನೆ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಅಂಬರೀಶ್‌ ಅವರ ಸ್ಮಾರಕ ನಿರ್ಮಾಣಕ್ಕೆ ಜನವರಿಯಲ್ಲಿ ಪ್ರತಿಷ್ಠಾನ ರಚಿಸಲಾಗಿತ್ತು.

ನಿನ್ನೆ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ  ಈ ಬಗ್ಗೆ ಚರ್ಚೆ ನಡೆದಿದ್ದು ಸಭೆಯಲ್ಲಿ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಶ್ ಇಬ್ಬರೂ ಭಾಗಿಯಾಗಿದ್ದರು.

ಎಂಟು ಸದಸ್ಯರ ಸಮಿತಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಸರ್ಕಾರದಿಂದ 5 ಕೋಟಿ ಘೋಷಣೆ ಮಾಡಲಾಗಿದೆ.ಈ ವಿಷಯ ಹೊರಬೀಳುತ್ತಿದ್ದಂತೆ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಡಾ.ವಿಷ್ಣುವರ್ಧನ ಸ್ಮಾರಕದ ವಿಚಾರವನ್ನು ಸಂಸದೆ ಸುಮಲತಾ ಹಾಗೂ ಸರ್ಕಾರ ಕಡೆಗಣಿಸಿದೆ ಎನ್ನುವ ಆರೋಪ ವಿಷ್ಣು ಅಭಿಮಾನಿಗಳ ವಲಯದಿಂದ ಕೇಳಿ ಬರುತ್ತಿದೆ.

ಈ ವಿಚಾರದ ಬಗ್ಗೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

'ನಮ್ಮ ಪ್ರೀತಿಯ ವಿಷ್ಣುವರ್ಧನ್‌ ರವರ ಸ್ಮಾರಕದ ಕೆಲಸ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ 1 ವರ್ಷಗಳ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದು ಬಂದಿಲ್ಲ'

'ನನಗೆ ತಿಳಿದಿರುವಂತೆ 10 ಕೋಟಿಯಲ್ಲಿ 5 ಕೋಟಿ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ'.

'ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ' ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೋನಾ ಹಾವಳಿಯಿಂದ ತತ್ತರಿಸಿ ಹೋಗುತ್ತಿರುವ ಈ  ಪರಿಸ್ಥಿತಿಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದು ಅದಕ್ಕೆ  5 ಕೋಟಿ ಬಿಡುಗಡೆ ಮಾಡುವುದು ಬೇಕಿತ್ತಾ  ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಅಂಬಿ - ವಿಷ್ಣು ಜೊತೆಗಿದ್ದು ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ.

loader