- Home
- Entertainment
- Sandalwood
- ಎರಡು ಕನಸು ಚಿತ್ರದ ಹಾಡನ್ನು ಹಾಡಿದ ಮೋಹನ್ ಲಾಲ್; ನಟನ ಕಾಲ್ ಕೆಳಗೆ ನುಗ್ಗಿ ಬುದ್ದಿ ಕಲಿಬೇಕು ಎಂದ ನೆಟ್ಟಿಗರು
ಎರಡು ಕನಸು ಚಿತ್ರದ ಹಾಡನ್ನು ಹಾಡಿದ ಮೋಹನ್ ಲಾಲ್; ನಟನ ಕಾಲ್ ಕೆಳಗೆ ನುಗ್ಗಿ ಬುದ್ದಿ ಕಲಿಬೇಕು ಎಂದ ನೆಟ್ಟಿಗರು
ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ ಎಂದು ಹಾಡಿದ ಮೋಹನ್ ಲಾಲ್. ಕನ್ನಡ ಕೇಳಿ ಖುಷ್ ಆದ ನೆಟ್ಟಿಗರು.....

ಡಾ. ಪುನೀತ್ ರಾಜ್‌ಕುಮಾರ್ ನಟನೆಯ ಮೈತ್ರಿ ಸಿನಿಮಾದಲ್ಲಿ ಮಲಯಾಳಂ ನಟ ಮೋಹನ್ ಲಾಲ್ ನಟಿಸಿದ್ದರು. ಮೋಹನ್ ಲಾಲ್ ಅಣ್ಣಾವ್ರ ಫ್ಯಾಮಿಲಿ ಮೇಲೆ ಪ್ರೀತಿ ಮತ್ತು ಗೌರವ.
ಗಿರಿರಾಜ್ ನಿರ್ದೇಶನದ ಈ ಸೊಷಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಪ್ಪು ಮತ್ತು ಮೋಹನ್ ಲಾಲ್ ಜುಗಲ್ ಬಂದಿ ಸಖತ್ ಇಷ್ಟವಾಗುತ್ತದೆ.
ಅಣ್ಣಾವ್ರ ಎರಡು ಕನಸು ಚಿತ್ರದ ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ ಹಾಡನ್ನು ಮೋಹನ್‌ಲಾಲ್ ಮೊಬೈಲ್‌ನಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಕನ್ನಡದ ಹಾಡನ್ನು ಹಾಡಲು ಪ್ರಯತ್ನ ಮಾಡುತ್ತಿರುವುದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
50 ವರ್ಷಗಳ ಹಿಂದೆ ತೆರೆಕಂಡ ಎರಡು ಕನಸು ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಮಂಜುಳಾ ಜೋಡಿಯಾಗಿದ್ದರು. ದೊರೆ ಭಗವಾನ್ ಆಕ್ಷನ್ ಕಟ್ ಹೇಳಿದ್ದರು.
ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡ ಸಿನಿಮಾ ನೋಡಲ್ಲ ಅನ್ನೋ ಜನರು ಮೋಹನ್ ಲಾಲ್ ಕಾಲು ಕಳಗೆ ನಿಗ್ಗಿ ಬುದ್ಧಿ ಕಲಿಯಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.