ಲೂಸ್‌ಮಾದ ಯೋಗಿ 'ನಾನು ಅದು ಮತ್ತು ಸರೋಜ' ಟ್ರೇಲರ್ ಬಿಡುಗಡೆ
ಯೋಗಿ ಮತ್ತು ದತ್ತಣ್ಣ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ನಾನು ಅದು ಮತ್ತು ಸರೋಜ' ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಫೋಟೋಕೃಪೆ: ಮನು

ಲೂಸ್‌ಮಾದ ಯೋಗಿ ನಟನೆಯ ‘ನಾನು, ಅದು ಮತ್ತು ಸರೋಜ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರವನ್ನು ವಿನಯ್ ಪ್ರೀತಮ್ ನಿರ್ದೇಶಿಸಿದ್ದಾರೆ.
ದತ್ತಣ್ಣ (Dattanna), ಅಪೂರ್ವ ಭಾರದ್ವಾಜ್ (Apoorva Bharadwaj) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೂಜಾ ವಸಂತಕುಮಾರ್ ನಿರ್ಮಾಪಕರು.
ಡಿಸೆಂಬರ್ 30ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿನಯ್ ಪ್ರೀತಮ್, ‘ನಾನು ಈ ಹಿಂದೆ ಮಡಮಕ್ಕಿ ಚಿತ್ರವನ್ನು ನಿರ್ದೇಶಿಸಿದ್ದೆ.'
'ಇದು ನನ್ನ ಎರಡನೇ ಸಿನಿಮಾ. ಮೂರು ಮುಖ್ಯ ಪಾತ್ರಗಳ ಸುತ್ತ ಕತೆ ಸಾಗುತ್ತದೆ. ಲೈಂಗಿಕ ಕಾರ್ಯಕರ್ತೆಯ ಕತೆಯನ್ನು ಒಳಗೊಂಡ ಸಿನಿಮಾ ಇದು’ ಎಂದರು.
ನಟ ಯೋಗಿ ತಮಿಳಿನಲ್ಲಿ ವಿಜಯ್ ಸೇತುಪತಿ ನಟನೆಯ ಚಿತ್ರವೊಂದನ್ನು ನೋಡಿದ ಮೇಲೆ ಅಂಥ ಕತೆ ಬಂದರೆ ನಟಿಸುವುದಕ್ಕೆ ಕಾಯುತ್ತಿದ್ದರಂತೆ. ಅದೇ ರೀತಿಯ ಪಾತ್ರ ಈ ಚಿತ್ರದಲ್ಲಿ ಸಿಕ್ಕಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
‘ನನಗೆ ಇದೊಂದು ಹೊಸ ರೀತಿಯ ಪಾತ್ರ. ವಿಭಿನ್ನ ಪಾತ್ರಗಳಲ್ಲಿ ನಟಿಸುವುದಕ್ಕೆ ಕಾಯುತ್ತಿದ್ದವನಿಗೆ ಸಿಕ್ಕ ಒಳ್ಳೆಯ ಕತೆ ಇದು’ ಎಂದು ಯೋಗಿ ಹೇಳಿಕೊಂಡರು. ಚಿತ್ರದಲ್ಲಿ ಅಪೂರ್ವ ಭಾರದ್ವಾಜ್ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸಿದ್ದಾರೆ.
‘ಈ ರೀತಿಯ ಪಾತ್ರ ಮಾಡುವುದಕ್ಕೆ ಆರಂಭದಲ್ಲಿ ಮುಜುಗರಪಟ್ಟೆ. ಆ ನಂತರ ಅದೊಂದು ಪಾತ್ರವಾಗಿ ನೋಡಿ ನಟಿಸಿದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ’ ಎಂಬುದು ಅಪೂರ್ವ ಮಾತು. ಸಂದೀಪ್, ಕುರಿಬಾಂಡ್ ರಂಗ, ಪ್ರವೀಣ್ ಶೆಟ್ಟಿನಟಿಸಿದ್ದಾರೆ. ಪ್ರಸಾದ್ ಶೆಟ್ಟಿಸಂಗೀತ ನಿರ್ದೇಶಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.