ಅಂಥ ಪಾತ್ರ ಮತ್ತೊಮ್ಮೆ ಮಾಡಲ್ಲ ಎಂದ ಲಂಕೆ ನಟಿ ಕಾವ್ಯಾ ಶೆಟ್ಟಿ: ಕಾರಣ ಏನು ?
ತೆಲುಗಿಗೆ ಲಂಕೆ ರಿಮೇಕ್: ರಾಮ್‌ಪ್ರಸಾದ್ ನಿರ್ದೇಶಕರ ಆಫರ್ ತಿರಸ್ಕರಿಸಿದ ಕಾವ್ಯಾ ಶೆಟ್ಟಿ

ಲಂಕೆ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದ್ದು, ದೊಡ್ಡ ನಿರ್ಮಾಣ ಸಂಸ್ಥೆ ಹಕ್ಕುಗಳನ್ನು ಪಡೆದುಕೊಂಡಿದೆ. ಸ್ಟಾರ್ ನಟರೊಬ್ಬರು ನಟಿಸುವ ಸಾಧ್ಯತೆ ಇದೆ ಎಂದು ಲಂಕೆ ಚಿತ್ರದ ನಿರ್ದೇಶಕ ರಾಮ್‌ಪ್ರಸಾದ್(Ram Prasad) ತಿಳಿಸಿದ್ದಾರೆ.
ಲಂಕೆ ಚಿತ್ರ ಇಪ್ಪತ್ತೈದು ದಿನ ಪೂರೈಸಿದ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ(Press meet) ಅವರು ಮಾತನಾಡಿದ್ದಾರೆ. ಲಂಕೆ ಚಿತ್ರದಲ್ಲಿ ನಟಿಸಿದ್ದ ಕಾವ್ಯಾ ಶೆಟ್ಟಿಹಾಗೂ ಎಸ್ತರ್ ನೊರೋನ್ಹಾ ತೆಲುಗಿನಲ್ಲೂ ನಟಿಸಲಿದ್ದಾರೆ ಎಂದಿದ್ದಾರೆ
ಮುಂದೆ ಯೋಗಿ ಹಾಗೂ ನನ್ನ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ ಬರಲಿದೆ. ಈ ಪ್ರಾಜೆಕ್ಟ್ ಈಗ ಪ್ರಿಪ್ರೊಡಕ್ಷನ್ ಹಂತದಲ್ಲಿದೆ’ ಎಂದರು.
ನಾಯಕಿ ಕಾವ್ಯಾ ಶೆಟ್ಟಿ(Kavya Shetty), ‘ಲಂಕೆಯಲ್ಲಿ ಮಾಡಿದಂಥಾ ಪಾತ್ರವನ್ನು ಇನ್ನೊಮ್ಮೆ ಮಾಡಲಾರೆ. ತೆಲುಗಿನಲ್ಲಿ ಆಫರ್ ಬಂದರೂ ಒಪ್ಪಿಕೊಳ್ಳಲ್ಲ’ ಅಂದರು.
ಕಲಾವಿದರಾದ ಲೂಸ್ ಮಾದ ಯೋಗೀಶ್, ಸುಚೇಂದ್ರ ಪ್ರಸಾದ್, ಎಸ್ತರ್ ನೊರೋನ್ಹಾ, ಸಂಗಮೇಶ್ ಉಪಾಸೆ, ನಿರ್ಮಾಪಕರ ಸಹೋದರ ನಂಜುಂಡ ಮೂರ್ತಿ, ನಿರ್ಮಾಪಕಿ ಸುರೇಖಾ ಉಪಸ್ಥಿತರಿದ್ದರು.
ಲೂಸ್ ಮಾದ ಯೋಗಿ ಅಭಿನಯದ 'ಲಂಕೆ'(Lanke) ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಅಪೂರ್ವ ಬೆಂಬಲ ಕಂಡು ಚಿತ್ರತಂಡ ಕೂಡ ಥ್ರಿಲ್ ಆಗಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.