ಕೋಟಿಗೊಬ್ಬ 3 ಚಿತ್ರದಲ್ಲಿ ನಾಯಕಿಗಿಂತ ಹೆಚ್ಚು ಗಮನ ಸೆಳೆದ ಪೊಲೀಸ್ ಯಾರು?
ಬಿಡುಗಡೆ ಆದ ಐದೇ ದಿನಕ್ಕೆ 50 ಕೋಟಿ ರೂ. ಗಳಿಸಿರುವ ಕೋಟಿಗೊಬ್ಬ 3 ಚಿತ್ರದಲ್ಲಿ ಇಂಟರ್‌ಕಾಮ್ ಪೊಲೀಸ್ ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಯಾರೀಕೆ?

ಕೋಟಿಗೊಬ್ಬ 3 (Kotigobba 3) ಚಿತ್ರದಲ್ಲಿರುವ ಇಂಟರ್‌ಕಾಮ್ ಪೊಲೀಸ್ ಶ್ರದ್ದಾ ದಾಸ್ (Shraddha Das) ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಇವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ಹರಿದು ಬರುತ್ತಿದೆ.
ಶ್ರದ್ಧಾ ದಾಸ್ 13 ವರ್ಷಗಳಿಂದಲೂ ಕನ್ನಡ (Kannada), ತೆಲುಗು (Telugu) ಮತ್ತು ಹಿಂದಿ (Hindi) ಚಿತ್ರಗಳಲ್ಲಿ ನಟಿಸಿದ್ದಾರೆ.
2012ರಲ್ಲಿ ಹೊಸ ಪ್ರೇಮ ಪುರಾಣ (Hosa Prema Purana) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಪಾದಾರ್ಪಣೆ ಮಾಡಿದ್ದರು.
2008ರಲ್ಲಿ ತೆಲುಗು (Tollywood) ಸಿದ್ದು ಫ್ರಂ ಸಿಕಾಕುಳಂ (Siddu from Sikakulam) ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು.
ಮುಂಬೈನಲ್ಲಿ (Mumbai) ಹುಟ್ಟಿ ಬೆಳೆದ ಶ್ರದ್ಧಾ ಮೂಲತಃ ಬೆಂಗಾಲಿನವರು (Bengali). ತಂದೆ ಸುನೀಲ್ ದಾಸ್ ಖ್ಯಾತ ಬ್ಯುಸಿನೆಸ್ ಟೈಫೂನ್.
ಮಾಸ್ ಮೀಡಿಯಾ ಇನ್ ಜರ್ನಲಿಸಂನಲ್ಲಿ ಪದವಿ ಪಡೆದಿರುವ ಶದ್ಧಾ ಸಣ್ಣ ಪುಟ್ಟ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದರು.
ಇನ್‌ಸ್ಟಾಗ್ರಾಂನಲ್ಲಿ 2.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ಶ್ರದ್ಧಾ ಅವರಿಗೆ ಕೋಟಿಗೊಬ್ಬ 3 ಚಿತ್ರದಿಂದ ಇನ್ನೂ ಜನಪ್ರಿಯತೆ ಹೆಚ್ಚಾಗುತ್ತಿದೆ.
ನಾಯಕಿಗಿಂತ ನೀವೇ ಸೂಪರ್ ಆಗಿ ಕಾಣಿಸುತ್ತಿದ್ದೀರಾ, ನೀವೇ ಹೈಲೈಟ್ ಎಂದು ನೆಟ್ಟಿಗರು (Netizens) ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.