MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • KGFಯಿಂದ ಕೋಟ್ಯಾಧಿಪತಿಯಾದ ನಟ ಯಶ್ ಸಂಭಾವನೆ ಎಷ್ಟು? ಆಸ್ತಿ ಮೌಲ್ಯವೆಷ್ಟು?

KGFಯಿಂದ ಕೋಟ್ಯಾಧಿಪತಿಯಾದ ನಟ ಯಶ್ ಸಂಭಾವನೆ ಎಷ್ಟು? ಆಸ್ತಿ ಮೌಲ್ಯವೆಷ್ಟು?

KGF ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ ನಟ ಯಶ್. ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಯಶ್ ಅವರ ಆಸ್ತಿ ಮೌಲ್ಯ, ಒಂದು ಸಿನೆಮಾಗೆ ಅವರು ಪಡೆಯುವ ಸಂಭಾವನೆ ಎಷ್ಟು ಎಂದು ಇಲ್ಲಿ ನೀಡಲಾಗಿದೆ.

2 Min read
Gowthami K
Published : Jan 08 2025, 01:18 PM IST
Share this Photo Gallery
  • FB
  • TW
  • Linkdin
  • Whatsapp
16

KGF ಸಿನಿಮಾದ ಮೂಲಕ ಖ್ಯಾತಿ ಪಡೆದ ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್. ಸಿನಿಮಾಕ್ಕೆ ಬರುವ ಮುನ್ನ ರಂಗಭೂಮಿ ನಾಟಕಗಳಲ್ಲಿ ನಟಿಸುತ್ತಿದ್ದಾಗ ಯಶ್ವಂತ್ ಎಂದು ಕರೆಯಲಾಗುತ್ತಿತ್ತು. ಆ ಹೆಸರನ್ನೇ ಸಂಕ್ಷೇಪಿಸಿ ಯಶ್ ಎಂದು ಇಟ್ಟುಕೊಂಡರು. 2004 ರಲ್ಲಿ ಕನ್ನಡ ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದ ಯಶ್, ನಂತರ ಕ್ರಮೇಣ ಸಿನಿಮಾರಂಗಕ್ಕೆ ಪ್ರವೇಶಿಸಿದರು. ಹಲವು ತಮಿಳು ಚಿತ್ರಗಳ ರಿಮೇಕ್‌ಗಳಲ್ಲಿ ನಟಿಸಿ ಯಶಸ್ಸು ಗಳಿಸಿದರು.

26

2018 ರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರ ಯಶ್ ಅವರ ಬದುಕನ್ನೇ ಬದಲಾಯಿಸಿತು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆದ ನಂತರ, ಎರಡನೇ ಭಾಗವನ್ನೂ ನಿರ್ಮಿಸಲಾಯಿತು. ಮೊದಲ ಭಾಗಕ್ಕಿಂತಲೂ ಉತ್ತಮವಾಗಿ ಮೂಡಿಬಂದ KGF 2, 1200 ಕೋಟಿಗೂ ಹೆಚ್ಚು ಗಳಿಕೆ ಕಂಡಿತು. ಈ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಕಿಂಗ್ ಆಗಿ ಹೊರಹೊಮ್ಮಿದರು ಯಶ್.  

36

KGF ಯಶಸ್ಸಿನ ನಂತರ 2 ವರ್ಷಗಳ ಕಾಲ ಯಾವುದೇ ಚಿತ್ರದಲ್ಲಿ ನಟಿಸದ ಯಶ್, ಈಗ 'ಟಾಕ್ಸಿಕ್' ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ನಟಿಸುತ್ತಿದ್ದಾರೆ. ಯಶ್‌ಗೆ ಅಕ್ಕನ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲೂ ಯಶ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

46

ಇದಲ್ಲದೆ, ಬಾಲಿವುಡ್‌ನ 'ರಾಮಾಯಣ' ಚಿತ್ರದಲ್ಲೂ ಯಶ್ ನಟಿಸುತ್ತಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್, ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಯಶ್ 200 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಖಳನಟ ಎನಿಸಿಕೊಂಡಿದ್ದಾರೆ ಯಶ್.

56

ಇಂದು ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್ ಅವರ ಆಸ್ತಿ ಮೌಲ್ಯ ಸುಮಾರು 53 ಕೋಟಿ ರೂ. ಇದೆ ಎನ್ನಲಾಗಿದೆ. ವ‍ರ್ಷದಲ್ಲಿ 6 ರಿಂದ 7 ಕೋಟಿ ಆದಾಯವಿದೆ. ಮುಂದಿನ ವರ್ಷ ಇದು 300 ಕೋಟಿ ರೂ. ದಾಟಬಹುದು. ಏಕೆಂದರೆ 'ಟಾಕ್ಸಿಕ್' ಚಿತ್ರಕ್ಕೆ 80 ಕೋಟಿ ರೂ. ಮತ್ತು 'ರಾಮಾಯಣ' ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಹೀಗಾಗಿ ಒಂದೇ ವರ್ಷದಲ್ಲಿ ಅವರ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಲಿದೆ ಎನ್ನಲಾಗಿದೆ.

66
ರಾಧಿಕಾ ಪಂಡಿತ್, ಯಶ್

ರಾಧಿಕಾ ಪಂಡಿತ್, ಯಶ್

ಯಶ್ ಅವರಿಗೆ ಬೆಂಗಳೂರಿನಲ್ಲಿ ಒಂದು ಐಷಾರಾಮಿ ಬಂಗಲೆ ಇದೆ. ಊರಿನಲ್ಲಿ ತೋಟದ ಮನೆ ಇದೆ. ಇದಲ್ಲದೆ, ಮರ್ಸಿಡಿಸ್ ಬೆನ್ಜ್ ಜಿಎಲ್‌ಎಸ್, ಆಡಿ ಕ್ಯೂ 7, BMW 520ಡಿ, ಪಜೆರೊ ಸ್ಪೋರ್ಟ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಐರಾ ಎಂಬ ಮಗಳು ಮತ್ತು ಯಥರ್ವ್ ಎಂಬ ಮಗನಿದ್ದಾನೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಯಶ್
ರಾಧಿಕಾ ಪಂಡಿತ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved