ಮಲೇಷ್ಯಾದಲ್ಲಿ ರಾಕಿ ಭಾಯ್ ಕ್ರೇಸ್: 'ಚಿನ್ನ'ಕ್ಕಾಗಿ ವಿದೇಶಕ್ಕೆ ಹಾರಿದ ಯಶ್
ಕೆಜಿಎಫ್ ಸ್ಟಾರ್ ಯಶ್ ಸದ್ಯ ಮಲೇಷ್ಯಾದಲ್ಲಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿರುವ ರಾಕಿಂಗ್ ಸ್ಟಾರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವಾಗ, ಯಾರ ಜೊತೆ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಇನ್ನೂ ರಾಕಿಂಗ್ ಸ್ಟಾರ್ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಂತ ಯಶ್ ಸೈಲೆಂಟ್ ಆಗಿ ಮನೆಯಲ್ಲಿ ಕುಳಿತಿಲ್ಲ. ಮಲೇಷ್ಯಾಗೆ ಹಾರಿದ್ದಾರೆ.
ಸ್ಟೈಲಿಶ್ ಲುಕ್, ಖಡಕ್ ನೋಟದ ಯಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಲೇಷ್ಯಾಗೆ ಎಂಟ್ರಿ ಕೊಡುತ್ತಿರುವ ಫೋಟೋದಿಂದ ಅಭಿಮಾನಿಗಳ ಜೊತೆ ಮಾತನಾಡುವ ಫೋಟೋವರೆಗೂ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಅಂದಹಾಗೆ ರಾಕಿಂಗ್ ಸ್ಟಾರ್ ಮಲೇಷ್ಯಾಗೆ ಎಂಟ್ರಿ ಕೊಟ್ಟಿದ್ದು ಚಿನ್ನಕ್ಕಾಗಿ. ಹೌದು ಚಿನ್ನದ ಅಂಗಡಿ ಇನೋಗ್ರೇಶನ್ ಮಾಡಲು ಯಶ್ ಮಲೇಶಿಯಾಗೆ ಭೇಟಿ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ತರಹೇವಾರಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿವೆ. ರಾಕಿಂಗ್ ಸ್ಟಾರ್ ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.
ಕೆಜಿಎಫ್ ಸಿನಿಮಾ ಬಳಿಕ ಯಶ್ ಹವಾ ಗಡಿಗೂ ಮೀರಿ ಹಬ್ಬಿದೆ. ಕೇವಲ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಪಸರಿಸಿದೆ. ಮಲೇಷ್ಯಾದಲ್ಲೂ ರಾಕಿಂಗ್ ಸ್ಟಾರ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡಿ ರಾಕಿ ಭಾಯ್ ಫುಲ್ ಖುಷ್ ಆಗಿದ್ದಾರೆ.
ಯಶ್ ಸುತ್ತಮುತ್ತ ಅಭಿಮಾನಿಗಳು ನೆರದಿದ್ದರು. ರಾಕಿ ಭಾಯ್ ಕ್ರೇಸ್ ಮಲೇಷ್ಯಾದಲ್ಲೂ ಹೇಗಿದೆ ಎನ್ನುವುದು ಅವರ ಎಂಟ್ರಿ ಮೂಲಕವೇ ಗೊತ್ತಾಗುತ್ತಿದೆ.
ಮಲೇಶಿಯಾದಿಂದ ಪಾವಾಸ್ ಆದ ಬಳಿಕ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡುವ ಸಾಧ್ಯತೆ ಇದೆ. ಅನೇಕ ಸಮಯದಿಂದ ಕಾದ ಅಭಿಮಾನಿಗಳಿಗೆ ಕೊನೆಗೂ ಭರ್ಜರಿ ಸುದ್ದಿ ಕೊಡ್ತಾರಾ ಎಂದು ಕಾದು ನೋಡಬೇಕಿದೆ.