- Home
- Entertainment
- Sandalwood
- ವಿದ್ಯಾಪತಿ ಚಿತ್ರಕ್ಕೆ ಕೆಜಿಎಫ್ ವಿಲನ್ ಎಂಟ್ರಿ: ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್
ವಿದ್ಯಾಪತಿ ಚಿತ್ರಕ್ಕೆ ಕೆಜಿಎಫ್ ವಿಲನ್ ಎಂಟ್ರಿ: ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್
ಹೊಸ ಪೋಸ್ಟರ್ ಮೂಲಕ ಗರುಡರಾಮ್ ಪಾತ್ರವನ್ನು ಚಿತ್ರತಂಡ ರಿವಿಲ್ ಮಾಡಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡುತ್ತಿದ್ದಾರೆ.

`ಟಗರುಪಲ್ಯ' ಚಿತ್ರದ ನಂತರ ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರಕ್ಕೆ ಕೆಜಿಎಫ್ ಚಿತ್ರದ ಖ್ಯಾತಿಯ ಗರುಡ ರಾಮ್ ಖಳನಾಯಕನಾಗಿ ಎಂಟ್ರಿ ಆಗಿದ್ದಾರೆ.
ಹೊಸ ಪೋಸ್ಟರ್ ಮೂಲಕ ಗರುಡರಾಮ್ ಪಾತ್ರವನ್ನು ಚಿತ್ರತಂಡ ರಿವಿಲ್ ಮಾಡಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡುತ್ತಿದ್ದಾರೆ.
ಆಕ್ಷನ್, ಕಾಮಿಡಿ ಕತೆ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್ ಅವರಿಗೆ ನಾಯಕಿಯಾಗಿ 'ಉಪಾಧ್ಯಕ್ಷ' ಚಿತ್ರದ ನಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.
ಲವಿತ್ ಛಾಯಾಗ್ರಹಣ, ಡಾಸ್ಕೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.
ರಂಗಾಯಣ ರಘು ಡ್ಯಾನ್ಸು: ಜಗ್ಗೇಶ್ ಹಾಡಿರುವ ಅಯ್ಯೋ ವಿಧಿಯೇ ಎಂಬ ಕಾಮಿಡಿ ವೀಡಿಯೋ ಹಾಡಿಗೆ ರಂಗಾಯಣ ರಘು ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ನಾಗಭೂಷಣ್ ಅವರ ಫಚೀತಿಯ ಕರುಣಾಜನಕ ದೃಶ್ಯವೂ ಇದೆ.