Harish Rai Passes Away: ಕೆಜಿಎಫ್ ಚಾಚಾ ಖ್ಯಾತಿಯ ನಟ ಹರೀಶ್ ರಾಯ್ ನಿಧನ
ಕೆಜಿಎಫ್ ಖ್ಯಾತಿಯ ಹಿರಿಯ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದಾಗಿ ನಿಧನರಾಗಿದ್ದಾರೆ. 90ರ ದಶಕದಿಂದಲೂ ಸಕ್ರಿಯರಾಗಿದ್ದ ಅವರು, ಓಂ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿತ್ರರಂಗದವರು ಆರ್ಥಿಕ ನೆರವು ನೀಡಿದ್ದರು.

ಹರೀಶ್ ರಾಯ್ ನಿಧನ
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಕೆಜಿಎಫ್, ಕೆಜಿಎಫ್-2 ಚಿತ್ರಗಳ ಮೂಲಕ ಹರೀಶ್ ರಾಯ್ ಕಂಬ್ಯಾಕ್ ಮಾಡಿದ್ದರು. ಆದ್ರೆ ಅನಾರೋಗ್ಯದಿಂದ ಮತ್ತೆ ಚಿತ್ರರಂಗದಿಂದ ಹಿಂದೆ ಸರಿದಿದ್ದರು.
ಚಿಕಿತ್ಸೆ
ಅನಾರೋಗ್ಯದಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರ ಚಿಕಿತ್ಸೆಗೆ ಚಿತ್ರರಂಗದ ಹಲವು ಕಲಾವಿದರು ಆರ್ಥಿಕ ಸಹಾಯ ಮಾಡಿದ್ದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹರೀಶ್ ರಾಯ್ ಹೊಟ್ಟೆ ಉಬ್ಬರಗೊಂಡು ದೇಹ ಕೃಷಗೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹರೀಶ್ ರಾಯ್ ಫೋಟೋಗಳು ವೈರಲ್ ಆಗಿದ್ದವು.
ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ
ಕರಾವಳಿ ಭಾಗದವರಾದ ಹರೀಶ್ ರಾಯ್ 90ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಓಂ, ನಲ್ಲ ಸೇರಿದಂತೆ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದರು. 90ರ ಕಾಲಘಟ್ಟದಲ್ಲಿ ಹರೀಶ್ ರಾಯ್ ಹೇರ್ ಸ್ಟೈಲ್ ಟ್ರೆಂಡ್ ಆಗಿತ್ತು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಹರೀಶ್ ರಾಯ್ ಜೈಲು ವಾಸ ಅನುಭವಿಸಿದ್ದರು.
ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟನೆ
ರಾಜ್ ಬಹದ್ದೂರ್, ನನ್ನ ಕನಸಿನ ಹೂವೆ,ಮೀಂದುಮ್ ಒರು ಕಾದಲ್ ಕಧೈ, ಜೋಡಿ ಹಕ್ಕಿ, ತಾಯವ್ವ, ಅಂಡರ್ ವರ್ಲ್ಡ್, ನಲ್ಲ, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ,, ಜಾಫರ್ ಅಲಿಯಾಸ್ ಮುರ್ಗಿ ಜಾಫರ್ ಸೇರಿದಂತೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹರೀಶ್ ರಾಯ್ ಅಗಲಿದ್ದಾರೆ.