ವೋಟ್ ಮಾಡಿ ಸೆಲ್ಫಿಗೆ ಪೋಸ್ ನೀಡಿದ ಕನ್ನಡ ನಟಿಯರು: ಇಲ್ಲಿವೆ ಫೋಟೋಗಳು
ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಮತಗಟ್ಟೆ ಬಳಿ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ. ಸಾಮಾನ್ಯರಂತೆ ಸಿನಿ ಸೆಲೆಬ್ರಿಟಿಗಳು ಸಹ ಮತದಾನ ಮಾಡುತ್ತಿದ್ದಾರೆ. ನಟಿ ಮಣಿಯರು ಸಹ ವೋಟ್ ಮಾಡಿದ್ದಾರೆ.
Karnataka election 2023
ನಟಿ ಮೇಘನಾ ಗಾಂವ್ಕರ್ ಇಂದು ಬೆಳಗ್ಗೆಯೇ ಬಂದು ಮತದಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ವೋಟ್ ಮಾಡಿದ ನಟಿ ಮೇಘನಾ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನಟಿ ಅಮೂಲ್ಯಾ ಇಂದು ಗೆಳಗ್ಗೆಯೇ ಮತಗಟ್ಟೆಗೆ ಬಂದು ವೋಟ್ ಮಾಡಿದ್ದಾರೆ. ಪತಿ ಜಗದೀಶ್ ಜೊತೆ ಆರ್ ಆರ್ ನಗರದ ಮತಗಟ್ಟೆಗೆ ಬಂದ ಅಮೂಲ್ಯಾ ತಮ್ಮ ಅಮೂಲ್ಯ ಮತ ಚಲಾಯಿಸಿದ್ದಾರೆ.
ಕನ್ನಡ ನಟಿ ಬೃಂದ ಆಚಾರ್ಯ ಕೂಡ ಇಂದು ಬೆಳಗ್ಗೆಯೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ನೆನಪಿರಲಿ ಪ್ರೇಮ್ ಜೊತೆ ಪ್ರೇಮ್ ಪೂಜ್ಯಂ ಸಿನಿಮಾದಲ್ಲಿ ನಟಿಸಿದ್ದರು ಬೃಂದಾ.
ಸದ್ಯ ರಾಘವೇಂದ್ರ ಸ್ಟೋರ್ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ್ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಮಗಳ ಜೊತೆ ಶ್ವೇತಾ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಸಂಯುಕ್ತ ಹೊರನಾಡು ಹಾಗೂ ತಾಯಿ ಸುಧಾ ಬೆಳವಾಡಿ ಇಬ್ಬರೂ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇಬ್ಬರೂ ವೋಟ್ ಮಾಡಿದ ಬಳಿಕ ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆಯೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ವೋಟ್ ಮಾಡಿದ ಬಳಿಕ ಫೋಟೋವನ್ನು ಶೇರ್ ಮಾಡಿದ್ದಾರೆ.
ನಟಿ ಸಂಗೀತ ಶೃಂಗೇರಿ ಕೂಡ ಮತದಾನ ಮಾಡಿದ್ದಾರೆ. ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಮಿಂಚಿದ್ದ ನಟಿ ಸಂಗೀತಾ ತಮ್ಮ ಹಕ್ಕು ಚಲಾಯಿಸಿದ್ದಾರೆ.
ನಟಿ ಆಶಾ ಭಟ್ ಕೂಡ ತನ್ನ ಅಮೂಲ್ಯ ಮತ ಚಲಾಯಿಸಿದ್ದಾರೆ. ವೋಟ್ ಮಾಡಿದ ಆಶಾ ಭಟ್ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಇಂದು ಬೆಳಗ್ಗೆಯೇ ಆಶಾ ಭಟ್ ತಮ್ಮ ಊರಿನಲ್ಲಿ ಮತದಾನ ಮಾಡಿದ್ದಾರೆ.
ನಟಿ ಸಪ್ತಮಿ ಗೌಡ ಕೂಡ ತಮ್ಮ ಹಕ್ಕು ಚಲಾಯಿಸಿದರು. ಕಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸಪ್ತಮಿ ಅಮೂಲ್ಯ ಮತ ಚಲಾಯಿಸಿ ಫೋಟೋ ಶೇರ್ ಮಾಡಿದ್ದಾರೆ.