Olle Hudga Pratham: 'ನಟ ಭಯಂಕರ ಪೋಸ್ಟರ್' ಬಿಡುಗಡೆ ಮಾಡಿದ ಸಿಎಂ!
ಒಳ್ಳೆ ಹುಡುಗನ ಚಿತ್ರಕ್ಕೆ ಸಾಥ್ ಕೊಟ್ಟ ಕರ್ನಾಟಕ ಸಿಎಂ. ಪೋಸ್ಟರ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಥಮ್ ನಟಸಿ ನಿರ್ದೇಶಿಸಿರುವ ‘ನಟ ಭಯಂಕರ’ ಚಿತ್ರದ ಪೋಸ್ಟರ್‌ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ.
ಉದಯ್ ಕೆ ಮೆಹ್ತಾ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮುಖ್ಯಮಂತ್ರಿಗಳಿಂದ ಪೋಸ್ಟರ್ ಬಿಡುಗಡೆ ಮಾಡಿಸಿದ ಬಗ್ಗೆ ಮಾತನಾಡಿದ್ದಾರೆ ಪ್ರಥಮ್.
‘ಮುಖ್ಯಮಂತ್ರಿಗಳಿಂದ ಪೋಸ್ಟರ್ ಬಿಡುಗಡೆ ಮಾಡಿಸಬೇಕೆಂದು ಬಹಳ ದಿನಗಳಿಂದ ಆಸೆ ಇತ್ತು. ಪೋಸ್ಟರ್‌ಅನ್ನು ಮೆಚ್ಚಿಕೊಂಡ ಸಿ ಎಂ ನೀವು ಪ್ರಚಾರ ಮಾಡುವ ರೀತಿ ವಿಭಿನ್ನವಾಗಿದೆ ಎಂದು ಚಿತ್ರಕ್ಕೆ ಶುಭ ಹಾರೈಸಿದರು’ ಎಂದು ತಿಳಿಸಿದರು.
ಪ್ರಥಮ್ ಅವರೊಂದಿಗೆ ಹಿರಿಯ ನಟ ಸಾಯಿಪ್ರಕಾಶ್, ಓಂ ಪ್ರಕಾಶ್ ರಾವ್, ನಿಹಾರಿಕಾ ಶೆಣೈ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.
'ಧನ್ಯವಾದಗಳು ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಸರ್ ನಮ್ಮ ಹೈ ವೋಲ್ಟೇಜ್ ಪೋಸ್ಟರ್ ಬಿಡುಗಡೆ ಮಾಡಿದ್ದಕ್ಕೆ' ಎಂದು ಪ್ರಥಮ್ ಫೋಟೋ ಅಪ್ಲೋಡ್ ಮಾಡಿದ್ದಾರೆ.
'ಮುಖ್ಯಮಂತ್ರಿಗಳು ಒಮ್ಮೆ ಪೋಸ್ಟರ್ ನೋಡಿ ಸರ್ಪ್ರೈಸ್ ಆದ್ರು ನಿಮ್ಗೆ ಏನನಿಸುತ್ತೆ ಕಾಮೆಂಟ್ ಹೇಳಿ. ನನಗೆ ಆಶೀರ್ವಾದ ಮಾಡೋಕೆ ಬಯಸೋ ಕನ್ನಡಿಗರು ಶೇರ್ ಮಾಡಿ' ಎಂದು ಬರೆದುಕೊಂಡಿದ್ದಾರೆ.