- Home
- Entertainment
- Sandalwood
- ಕರ್ಲಿ ಹೇರ್ ವೇರಿ ಫೇರ್; ಸ್ಟೈಲ್ ಮಾಡೋದ್ರಲ್ಲಿ ರಿಷಬ್ ಶೆಟ್ಟಿ ಹೆಂಡ್ತಿ ಯಾವ ನಟಿಗೂ ಕಡಿಮೆ ಇಲ್ಲ!
ಕರ್ಲಿ ಹೇರ್ ವೇರಿ ಫೇರ್; ಸ್ಟೈಲ್ ಮಾಡೋದ್ರಲ್ಲಿ ರಿಷಬ್ ಶೆಟ್ಟಿ ಹೆಂಡ್ತಿ ಯಾವ ನಟಿಗೂ ಕಡಿಮೆ ಇಲ್ಲ!
ಕಾಂತಾರ ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಪ್ರಗತಿ ಶೆಟ್ಟಿ. ಸಾಫ್ಟ್‌ವೇರ್ ಹುಡುಗಿ ಬ್ಯೂಟಿಫುಲ್ ಜರ್ನಿ.....

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಮತ್ತು ನಟ ಎಂದು ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಕಾಂತಾರ ಬಿಡುಗಡೆ ನಂತರ ಡಿವೈನ್ ಸ್ಟಾರ್ ಎಂದು ಹೆಸರು ಪಡೆದಿದ್ದಾರೆ.
ಕಾಂತಾರ ಚಿತ್ರದ ಮೂಲಕ ಸಪೋರ್ಟಿಂಗ್ ನಾಯಕಿ ಹಾಗೂ ಕಾಸ್ಟ್ಯೂಮ್ ಡಿಸೈನರ್ ಆಗಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಬಣ್ಣದ ಲೋಕದಲ್ಲಿ ಜರ್ನಿ ಆರಂಭಿಸಿದ್ದಾರೆ.
ರಿಷಬ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವ ಮುನ್ನ ಪ್ರಗತಿ ಶೆಟ್ಟಿ ಸಾಫ್ಟ್‌ವೇರ್ ಇಂಜಿನಿಯರ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.
ಮದುವೆ ನಂತರ ಐಟಿ ಕೆಲಸಕ್ಕೆ ಬ್ರೇಕ್ ಹಾಕಿದ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಆರಂಭಿಸಿದರು. ಡಿಸೈನರ್ ಕೋರ್ಸ್ ಮಾಡಿ ಸರ್ಟಿಫಿಕೇಟ್ ಪಡೆದಿದ್ದಾರೆ.
ಬೆಲ್ ಬಾಟಮ್, ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಮತ್ತು ಕಾಂತಾರ ಚಿತ್ರಕ್ಕೆ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ನಾನು ನಾಯಕನಾಗಬೇಕು ಎಂದು ಪತ್ನಿ ಪ್ರಗತಿ ತುಂಬಾನೇ ಪುಶ್ ಮಾಡಿದ್ದಳು. ಹೆಂಡತಿ ಮುಂದೆ ರೊಮ್ಯಾನ್ಸ್ ಮಾಡುವುದಕ್ಕೆ ತುಂಬಾನೇ ಕಷ್ಟ ಎಂದು ಈ ಹಿಂದೆ ರಿಷಬ್ ಹೇಳಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಗತಿ ಆಗಾಗ ಹೊಸ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಸದಾ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುವ ನಟಿ ಜನರಿಗೆ ಬೇಗ ಹತ್ತಿರವಾಗುತ್ತಾರೆ.