ಗೆಟಪ್‌ಗಳಿಂದಲೇ ಗಮನ ಸೆಳೆಯುತ್ತಿರುವ ಶ್ರೀನಗರ ಕಿಟ್ಟಿ ಚಿತ್ರ 'ಗೌಳಿ'
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡುತ್ತಿದೆ ಶ್ರೀನಗರ ಕಿಟ್ಟ ಗೌಳಿ ಸಿನಿಮಾ. ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ.

ನಟ ಶ್ರೀನಗರ ಕಿಟ್ಟಿ ಅವರ ‘ಗೌಳಿ’ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ಈ ನಡುವೆ ಚಿತ್ರದ ಮೇಕಿಂಗ್ ಹಾಗೂ ಕಾಸ್ಟೂ್ಯಮ್‌ಗಳಿಂದಲೇ ಗಮನ ಸೆಳೆಯುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್, ದೊಡ್ಡ ನಿರೀಕ್ಷೆಗೆ ಕಾರಣವಾಗಿದೆ. ಇಲ್ಲಿ ಬರುವ ಚಿತ್ರದ ಪ್ರತಿಯೊಂದು ಪಾತ್ರದ ಗೆಟಪ್, ಕನ್ನಡದ ಮಟ್ಟಿಗೆ ಹೊಸತನದಿಂದ ಕೂಡಿದೆ ಎಂಬುದು ಬಹುತೇಕರ ಅಭಿಪ್ರಾಯ.
ವಿಲನ್ ಪಾತ್ರಗಳದ್ದೇ ಒಂದು ಲುಕ್ ಆದರೆ, ಈ ಹಿಂದೆ ಕಾಣದ ಗೆಟಪ್‌ನಲ್ಲಿ ಶ್ರೀನಗರ ಕಿಟ್ಟಿನಟಿಸಿರುವುದು ಚಿತ್ರದ ಮತ್ತೊಂದು ಹಂತ. ರಘು ಸಿಂಗಂ ನಿರ್ಮಾಣದ ಈ ಚಿತ್ರವನ್ನು ಸೂರ ನಿರ್ದೇಶಿಸಿದ್ದಾರೆ.
ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ. ಆ ಗೌಳಿ ಸಮುದಾಯದ ಕತೆಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.
ತುಂಬಾ ಎಮೋಷನಲ… ಆಗಿರುವ ವ್ಯಕ್ತಿಯೊಬ್ಬನ ಜೀವನದ ಏಳು, ಬೀಳುಗಳ ಪಯಣ ಇಲ್ಲಿದೆ. ಸದ್ಯ ಡಬ್ಬಿಂಗ್ ಹಂತದಲ್ಲಿರುವ ‘ಗೌಳಿ’ ಚಿತ್ರದ ಕಾಕ್ರೋಚ್ ಸುಧೀ, ರಂಗಾಯಣ ರಘು, ಯಶ್‌ಶೆಟ್ಟಿ, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹೀಗೆ ಒಂದಷ್ಟುಪಾತ್ರಗಳ ಲುಕ್ಕು ಬಿಡುಗಡೆ ಆಗಿದ್ದು, ವಿಭಿನ್ನವಾಗಿದೆ.
3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಅಲ್ಲಿ ವಿಶೇಷ ಸೆಟ್ ಹಾಕಿ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು.
130 ಮಂದಿ ಫೈಟರ್‌ಗಳು ಈ ಸಾಹಸದಲ್ಲಿ ಪಾಲ್ಗೊಂಡಿದ್ದಾರೆ. ಪಾವನಾ ಗೌಡ ನಾಯಕಿ. ಶಶಾಂಕ್ ಶೇಷಗಿರಿ, ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ ಚಿತ್ರಕ್ಕಿದೆ.