ಗಲ್ರಾನಿ ಜೈಲ್‌ ಬರ್ತಡೇ; ಸಂಜನಾ ಮಾಡಿಕೊಂಡ 9 ಕಿರಿಕ್‌ಗಳು

First Published 10, Oct 2020, 4:40 PM

ಸ್ಯಾಂಡಲ್‌ವುಡ್‌ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗಲ್ರಾನಿ ಪ್ರತಿ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ, ದೊಡ್ಡ ಪಾರ್ಟಿಯೊಂದನ್ನು ಅರೆಂಜ್ ಮಾಡುವ ಮೂಲಕ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಪರಪ್ಪನ ಅಗ್ರಹಾರದಲ್ಲಿ ರಾಗಿಣಿ ಜೊತೆಗಾದರೂ ಕಳೆಯಬಹುದಿತ್ತು. ಆದರೆ, ಅಲ್ಲಿಯೂ ಕಿರಿಕ್ ಮಾಡಿಕೊಂಡು ಬೇರೆ ಸಾಮಾನ್ಯ ವಿಚಾರಾಣಾಧೀನ ಕೈದಿಗಳೊಂದಿಗೆ ದಿನ ದೂಡಬೇಕಾಗಿದೆ.  ಒಟ್ಟಿನಲ್ಲಿ ವಿವಾದವನ್ನೇ ಹೊದ್ದಿರುವ ಸಂಜನಾ ಇದುವೆರೆಗು ಮಾಡಿಕೊಂಡ ವಿವಾದಗಳೇನು? ಇಲ್ಲಿದೆ ಝಲಕ್...

'ಗಂಡ ಹೆಂಡತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂಜನಾ ಕೆಲವು ವರ್ಷಗಳ ನಂತರ ಚಿತ್ರದ ಹೆಸರು ಕೇಳಿದರೆ ಸಾಕು ಉರಿದು ಬೀಳುತ್ತಿದ್ದರು. ಅದರಲ್ಲಿ ತೋರಿಸಲಾದ ಆಪ್ತತೆಯ ಸನ್ನಿವೇಶಗಳನ್ನು ಧಿಕ್ಕರಿಸಲು ಪ್ರಾರಂಭಿಸಿ ಕಾಂಟ್ರೋವರ್ಸಿ ಮಾಡಿಕೊಂಡರು.

ಬ್ಯಾಕ್‌ಲೆಸ್‌ ವಸ್ತ್ರ ಧರಿಸಿ ದಂಡುಪಾಳ್ಯ ಚಿತ್ರದಲ್ಲಿ ಕಾಣಿಸಿಕೊಂಡ ಆಕೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು. ಅದಕ್ಕೆ ಪ್ರತಿಕ್ರಯೆ ನೀಡಿ  ಮತ್ತೊಮ್ಮೆ ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡರು.

ವೈದ್ಯರೊಬ್ಬರನ್ನು ಮದುವೆಯಾಗಿ ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ಅಗತ್ಯ ಪುರಾವೆಗಳು ಸಿಕ್ಕಿವೆ. ಆದರೆ, ಯಾವಾಗ ಡ್ರಗ್ ಕೇಸಲ್ಲಿ ಇವರ ಹೆಸರು ಥಳಕು ಹಾಕಿ ಕೊಂಡಿತೋ, ನನ್ನನ್ನು ನನ್ನ ಪಾಡಿಗೆ ಬಿಡಿ. ಇನ್ನೂ ಮದುವೆಯೂ ಆಗಿಲ್ಲ ನಂಗೆ ಎನ್ನುವ ಮೂಲಕ ಮತ್ತೊಂದು ಸುಳ್ಳು ಹೇಳಿ ಸಿಕ್ಕಿ ಹಾಕಿ ಕೊಂಡಿದ್ದು ಸುದ್ದಿಯಾಗಿತ್ತು.

ಡ್ರಗ್ಸ್ ಸೇವಿಸಿ ಪಾರ್ಟಿ ಮಾಡುತ್ತಾರೆ. ರಾತ್ರಿ ಹೊತ್ತು ಜೋರಾಗಿ ಮ್ಯೂಸಿಕ್ ಹಾಕ್ಕೊಂಡು ಸ್ಥಳೀಯರಿಗೆ ತೊಂದರೆ ನೀಡುತ್ತಾರೆಂದು, ಸಂಜನಾ ವಾಸಿಸುತ್ತಿದ್ದ ಅಪಾರ್ಟ್‌ಮೆಂಟಿನ ನೆರೆಹೊರೆಯವರು ಆರೋಪಿಸಿದ್ದರು. ತಮ್ಮ ಫ್ಲಾಟ್‌‌ನಲ್ಲಿ ವಾಸವಿದ್ದು ವಕೀಲರ ಜೊತೆಯೂ ಕಿರಿಕ್ ಮಾಡಿಕೊಂಡಿದ್ದಾರೆಂಬ ಸುದ್ದಿ ಹರಿದಾಡಿತ್ತು.

ಸ್ಯಾಂಡಲ್‌ವುಡ್ ನಿರ್ಮಾಪಕಿ ವಂದನಾ ಜೊತೆ ಪಾರ್ಟಿ ಮಾಡುವ ಸಣ್ಣ ವಿಚಾರಕ್ಕೆ ವಾದ ವಿವಾದ ಮಾಡಿಕೊಂಡು ಕೈಯಲ್ಲಿದ್ದ ಬೀಯರ್ ಬಾಟಲ್‌ನಿಂದ ಸಂಜನಾ ಹಲ್ಲೆ ಮಾಡಿದ್ದಾರೆಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಶ್ರೀಲಂಕಾದ ಕ್ಯಾಸಿನೋದಲ್ಲಿ ಕರ್ನಾಟಕ ರಾಜಕೀಯ ಗಣ್ಯರ ಜೊತೆ ಪಾರ್ಟಿ ಮಾಡಿದ್ದರು ಎಂಬ ಸುದ್ದಿ ಹರಿದಾಡಿತ್ತು. ಆದರೆ ಕಾರ್ಯಕ್ರಮದಲ್ಲಿ ಇನ್ನಿತರೆ ಸ್ಟಾರ್ ನಟರೂ ಇದ್ದರು, ಎಂದು ಸಂಜನಾ ಅವರ ಹೆಸರು ಹೇಳಿ ಸಂಕಷ್ಟದಲ್ಲಿ ಸಿಲುಕಿಕೊಂಡರು.

ದುಬಾರಿ ಕಾರನ್ನು ಡ್ರೈವ್ ಮಾಡುತ್ತಿದ್ದ ವೇಳೆ ಸೆಲ್ಫೀ ವಿಡಿಯೋ ಸೆರೆ ಹಿಡಿದ ಕಾರಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಂಡ ಕಟ್ಟಿ ಪ್ರಕರಣದಿಂದ ಪಾರಾಗಿದ್ದರು.

ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಸಂಜನಾ #MeTooಆರೋಪ ಮಾಡಿದ್ದರು. ಆದರೆ ನಟ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ಸಂಜನಾ ನಿರ್ದೇಶಕಕ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಹೇಳಿ, ಕ್ಷಮೆ ಕೋರಿದ್ದರು.

ಇದೀಗ ಡ್ರಗ್ ಪ್ರಕರಣದಲ್ಲಿ ನಟಿಯರಾದ ಸಂಜನಾ ಹಾಗೂ ರಾಗಿಣಿ ಒಟ್ಟಿಗೆ ಕಂಬಿ ಎಣಿಸುತ್ತಿದ್ದಾರೆ. ಹುಟ್ಟುಹಬ್ಬದಂದು ಧರಿಸುವ ಬಟ್ಟೆ ವಿಷಯಕ್ಕೆ  ಸಂಬಂಧಿಸಿದಂತೆ ಇಬ್ಬರೂ ಜಗಳವಾಡಿದ್ದಾರೆ. ಜೈಲಿನಲ್ಲಿ ಅಕ್ಷರಶಃ ರಾಕ್ಷಸಿಯಂತೆ ಕೂಗಾಡಿದ್ದರು ಸಂಜನಾ.

ಇದರಿಂದ ಬೇಸತ್ತ ಜೈಲು ಸಿಬ್ಬಂದಿ ಇಬ್ಬರನ್ನೂ ಇದೀಗ ಸಾಮಾನ್ಯ ಕೈದಿಗಳೊಂದಿಗೆ ಬೇರೆ ಬೇರೆ ಸೆಲ್‌ನಲ್ಲಿಟ್ಟಿದ್ದಾರೆ. ಜೈಲಲ್ಲಿ ಕೊಟ್ಟ ಚಿತ್ರಾನ್ನವನ್ನು ಅರ್ಧ ಮಾತ್ರ ತಿಂದು, ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿದೆ ಗಂಡ-ಹೆಂಡತಿ ಚಿತ್ರ ಖ್ಯಾತಿಯ ಸಂಜನಾ.

loader