ಪುನೀತ್ ರಾಜ್‌ಕುಮಾರ್ ಪುತ್ರಿಯರ ಹೆಸರಿನಲ್ಲಿ ಫ್ಯಾನ್ ಪೇಜ್;ಫೋಟೋ ವೈರಲ್!
ಧ್ರುತಿ ಮತ್ತು ವಂದಿತಾ ಬಾಲ್ಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್. ಇವರು ನಮ್ಮ ಮಕ್ಕಳು ಎಂದ ಅಭಿಮಾನಿಗಳು.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ನಿರ್ಮಾಪಕಿ ಅಶ್ವಿನಿ ಅವರ ಮುದ್ದಾದ ಹೆಣ್ಣುಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್.
ಹಿರಿಯ ಪುತ್ರಿ ಧ್ರುತಿಯನ್ನು ಅಪ್ಪು ಪ್ರೀತಿಯಿಂದ toto ಎಂದು ಕರೆಯುತ್ತಿದ್ದರು ಕಿರಿಯ ಪುತ್ರಿ ವಂದಿತಾಳನ್ನು nukki ಎಂದು ಕರೆಯುತ್ತಾರೆ.
toto ಮತ್ತು nukki ಹಾಗೂ ಧ್ರುತಿ ಮತ್ತು ವಂದಿತಾ ಹೆಸರಿನಲ್ಲಿ ಅಪ್ಪು ಆಭಿಮಾನಿಗಳು ಇನ್‌ಸ್ಟಾಗ್ರಾಂನಲ್ಲಿ ಪೇಜ್ ಶುರು ಮಾಡಿದ್ದಾರೆ. ಅವರ ಪ್ರತಿಯೊಂದು ಫೋಟೋಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ.
ಧ್ರುತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸಣ್ಣ ವಯಸ್ಸಿನಲ್ಲಿ ತಂದೆ ರೀತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕಣ್ಣಿನ ಸಮಸ್ಯೆ ಎದುರಾದ ವಯಸ್ಸಾದವರಿಗೆ ನೆರವು ನೀಡಲು ಅಭಿಯಾನವನ್ನು ಶುರು ಮಾಡಿದ್ದಾದ್ದರು.
ಪುತಿ ವಂದಿತಾ ಬೆಂಗಳೂರಿನಲ್ಲಿರುವ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಮಕ್ಕಳು ಹಾಗೂ ವಿಜಯ್ ರಾಘವೇಂದ್ರ ಸಹೋದರಿ ಮಗಳು ವಂದಿತಾಗೆ ಬೆಸ್ಟ್ ಫ್ರೆಂಡ್ಸ್.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ನೆದರ್‌ಲ್ಯಾಂಡ್‌ನಲ್ಲಿ ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಿದ್ದರು. ಆಗ ಧ್ರುತಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕ ಚಾಲನೆ ಕೊಟ್ಟರು.
ಪ್ರತಿಯೊಬ್ಬ ಕನ್ನಡಿನನ್ನು ನಮ್ಮ ಮನೆಯವರು ಎನ್ನುವ ರೀತಿಯಲ್ಲಿ ಅಪ್ಪು ನೋಡಿಕೊಂಡಿದ್ದಾರೆ. ಈಗ ಅವರ ಮಕ್ಕಳು ನಮ್ಮ ಜವಾಬ್ದಾರಿ ಅವರು ನಮ್ಮ ಮನೆ ಹೆಣ್ಣುಮಕ್ಕಳು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.