ಪತಿಯ 34ನೇ ಹುಟ್ಟುಹಬ್ಬಕ್ಕೆ ನಾವು ಮೂವರಾಗುತ್ತಿದ್ದೇವೆ ಎಂದ ಪ್ರಣೀತಾ!
ಪತಿ ಹುಟ್ಟುಹಬ್ಬದ ದಿನ ಕುಟುಂಬಕ್ಕೆ ಬರ ಮಾಡಿಕೊಳ್ಳುತ್ತಿರುವ ಹೊಸ ಅತಿಥಿ ಬಗ್ಗೆ ರಿವೀಲ್ ಮಾಡಿದ ನಟಿ ಪ್ರಣೀತಾ...
ಪೋರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಣೀತಾ ಸುಭಾಷ್ ಇಂದು ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಜೊತೆ ಕಳೆದ ವರ್ಷ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಮದುವೆ ವಿಚಾರ ರಿವೀಲ್ ಮಾಡಿದ್ದರು.
ಇಂದು ಪ್ರಣೀತಾ ಅವರ ಪತಿ ನಿತಿನ್ ಅವರು 34ರ ವಸಂತಕ್ಕೆ ಕಾಲಿಡುತ್ತಿರುವ ಪ್ರಯುಕ್ತ ಸ್ಪೆಷಲ್ ಫೋಟೋ ಹಂಚಿಕೊಂಡು ನಾವು ಮೂವರಾಗುತ್ತಿದ್ದೇವೆ ಎಂದು ರಿವೀಲ್ ಮಾಡಿದ್ದಾರೆ.
'ನನ್ನ ಪತಿಗೆ ಇಂದು 34ನೇ ವರ್ಷದ ಹುಟ್ಟುಹಬ್ಬ. ಮೇಲಿರುವ ದೇವತೆಗಳು ನಮಗೆಂದು ವಿಶೇಷವಾದ ಉಡುಗೊರೆ ಕೊಟ್ಟಿದ್ದಾರೆ' ಎಂದು ಪ್ರಣೀತಾ ಬರೆದುಕೊಂಡಿದ್ದಾರೆ.
ಪ್ರಣೀತಾರನ್ನು ಪತಿ ಎತ್ತುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಕೈಯಲ್ಲಿ ಮಗುವಿನ ultrasound scan ಫೋಟೋ ಹಿಡಿದುಕೊಂಡಿದ್ದಾರೆ.
ಮತ್ತೊಂದು ಫೋಟೋದಲ್ಲಿ ಪತಿಯನ್ನು ತಬ್ಬಿಕೊಂಡಿದ್ದಾರೆ. ಕೈಯಲ್ಲಿ ಪ್ರೆಗ್ನೆನ್ಸಿ ಕಿಟ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಪ್ತ ಸ್ನೇಹಿತರಿಂದ ಮತ್ತು ಸಿನಿ ಸ್ನೇಹಿತರಿಂದ ಪ್ರಣೀತಾ ಮತ್ತು ನಿತಿನ್‌ಗೆ ಶುಭಾಶಯಗಳು ಹರಿದು ಬರುತ್ತಿದೆ.