ಡ್ಯಾನ್ಸ್ ರಿಯಾಲಿಟಿ ಶೋಗೆ ಧರಿಸಿದ ಸೀರೆ ಯಾಕೆ ಸ್ಪೆಷಲ್ ಎಂದು ರಿವೀಲ್ ಮಾಡಿದ ಮೇಘನಾ ರಾಜ್!
ವೀಕ್ಷಕರು ಕಣ್ಣು ಮೇಘನಾ ರಾಜ್ ಫ್ಯಾಷನ್ ಮೇಲೆ. ಸೀರೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳಿಗೆ ಉತ್ತರ ಕೊಟ್ಟ ನಟಿ.
ಕನ್ನಡ ಚಿತ್ರರಂಗದ ಮುದ್ಧು ಮುಖದ ಚೆಲುವೆ ಮೇಘನಾ ರಾಜ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ.
ಪ್ರತಿ ವೀಕೆಂಡ್ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಮೇಘನಾ ರಾಜ್ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ ಆದರೆ ಮಹಾ ಮಿಲನ್ ಇನ್ನೂ ವಿಶೇಷವಾಗಿತ್ತು.
ಗ್ರೀನ್ ಮತ್ತು ಪರ್ಪಲ್ ಕಾಂಬಿನೇಷನಲ್ ಸೀರೆಯಲ್ಲಿ ಸೂಪರ್ ಅಗಿ ಕಾಣಿಸುತ್ತಿದ್ದರು. ಸಿಂಪಲ್ ಹೇರ್ ಬನ್, ಸರ ಮತ್ತು ವಾಚ್ ಕಟ್ಟಿ ಮೇಘನಾ ಮಿಂಚುತ್ತಿದ್ದಾರೆ.
ಮಹಾಮಿಲನಾ ಕಾರ್ಯಕ್ರಮಕ್ಕೆ ನಾನು ನನ್ನ ಸೀಮಂತದ ಸೀರೆ ಧರಿಸಿರುವ. ನನ್ನ ಫೋಷಕರು ಕೊಟ್ಟಿರುವ ಮರೆಯಲಾಗದ ಉಡುಗೊರೆ ಎಂದು ಮೇಘನಾ ಬರೆದುಕೊಂಡಿದ್ದಾರೆ.
ಮೇಘನಾ ರಾಜ್ ನಿವಾಸದಲ್ಲಿ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಈ ವೇಳೆ ಮೇಘನಾ ಧರಿಸಿದ ಸೀರೆ ಇದು.
ರಾಯನ್‌ಗೋಸ್ಕರ ಕಮ್ ಬ್ಯಾಕ್ ಮಾಡುತ್ತಿರುವುದು ಎಂದು ಈ ಹಿಂದೆ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ ಸಂದರ್ಶನದಲ್ಲಿ ಮಾತನಾಡಿದ್ದರು. ತಾಯಿಯಾಗಿ ಕೆಲಸ ಮತ್ತು ಮನೆ ಎರಡನ್ನೂ ಸಮವಾಗಿ ನಿಭಾಯಿಸುತ್ತಿರುವುದಕ್ಕೆ ನೀವು ಗ್ರೇಟ್ ಎನ್ನುತ್ತಾರೆ ಅಭಿಮಾನಿಗಳು.
ಶೂಟಿಂಗ್ ಹೊರತು ಪಡಿಸಿ ನೋಡಿದರೂ, ಹೊರಗಡೆ ಕಾಣಿಸಿಕೊಂಡಾಗ ಅಥವಾ ಸಿನಿಮಾದಲ್ಲಿ ಮೇಘನಾ ರಾಜ್ ಮನೆ ಮಗಳಂತೆ ರೆಡಿಯಾಗುತ್ತಾರೆ. ತುಂಬಾ ಸಿಂಪಲ್ ಮತ್ತು ಹೋಮ್ಲಿ ಹುಡುಗಿಯಾಗಿರುತ್ತಾರೆ.