ಸಂಚಾರಿ ವಿಜಯ್ ಪುಣ್ಯತಿಥಿ: ಪಂಚನಹಳ್ಳಿಯಲ್ಲಿ ಪ್ರತಿಮೆ ನಿರ್ಮಾಣ!
ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯತಿಥಿ. ಪಂಚನಹಳ್ಳಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ಕುಟುಂಬಸ್ಥರು,
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಮೊದಲ ವರ್ಷದ ಪುಣ್ಯತಿಥಿ ಇಂದು. ಸ್ನೇಹಿತರು ಮತ್ತು ಕುಟುಂಬಸ್ಥರು ಪುತ್ತಳಿ ಅನಾವರಣ ಮಾಡಿದ್ದಾರೆ.
ಹೌದು! ಸಂಚಾರಿ ವಿಜಯ್ ಆಪ್ತ ಸ್ನೇಹಿತರು ಪುಣ್ಯತಿಋಇ ದಿನವೇ ಅಂತ್ಯಕ್ರಿಯೆ ಮಾಡಿದ ಜಮೀನಿನಲ್ಲಿ ಪುತ್ತಳಿ ಅನಾವರಣ ಮಾಡಿದ್ದಾರೆ.
ಕಳೆದ ವರ್ಷ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದ ಸಂಚಾರಿ ವಿಜಯ್ (Sanchari Vijay). ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದರು.
ಚಿಕ್ಕಮಂಗಳೂರು ಜಿಲ್ಲೆಯ ಕಡೂರಿನ ಬಳಿ ಇರುವ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಅಂತ್ಯಕ್ರಿಯೆ ಮಾಡಲಾಗಿತ್ತು. ಈಗ ಅಲ್ಲೇ ವಿಜಯ್ ಅವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಹರಿವು, ನಾತಿಚರಾಮಿ, ನಾನು ಅವನಲ್ಲ ಅವಳು ಸೇರಿಂದತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಫಿಲ್ಮಫೇರ್ ಪ್ರಶಸ್ತಿ ಪಡೆದುಕೊಂದರು.