ಡಿವೋರ್ಸ್ ಪಡೆದು ಒಬ್ಬಂಟಿ ಜೀವನ ನಡೆಸುತ್ತಿರುವ ಕನ್ನಡ ನಟಿಯರು!
ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ತಮ್ಮ ವೈಯಕ್ತಿಕ ಜೀವನದಲ್ಲಿ ಡಿವೋರ್ಸ್ ಪಡೆದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಯಾವ ನಟಿಯರು ಗಂಡನಿಂದ ದೂರವಾಗಿ ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆಯುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ...

ಚಿತ್ರರಂಗದಲ್ಲಿ ನಟಿಯಾಗಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸುವ ನಟಿಯರು ತಮ್ಮ ಸಿನಿಮಾ ಪಾತ್ರಗಳಿಗಿಂತ ವೈಯಕ್ತಿಕ ಜೀವನವನ್ನು ಭಾರೀ ವಿಭಿನ್ನವಾಗಿರುತ್ತಾರೆ. ಸಿನಿಮಾದಲ್ಲಿ ಸತಿ ಸಾವಿತ್ರಿ ಆಗಿದ್ದರೆ, ನಿಜ ಜೀವನದಲ್ಲಿ ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿ ಜೀವನ ಮಾಡುತ್ತಿರುತ್ತಾರೆ. ಹೀಗೆ, ಸಿನಿಮಾ ನಟನೆ ಹಾಗೂ ನಿಜ ಜೀವನ ತುಂಬಾ ಭಿನ್ನವಾಗಿರುತ್ತದೆ. ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರ ಮಾಹಿತಿ ಇಲ್ಲಿದೆ ನೋಡಿ..
ಶೃತಿ (Actress Shruthi): ಕನ್ನಡ ಚಿತ್ರರಂಗದಲ್ಲಿ 1990ರ ದಶಕದಿಂದ ಕಳೆದೆರಡು ವರ್ಷಗಳ ಹಿಂದೆ ಭಾರೀ ಹಿಟ್ ಆಗಿರುವ ಕಾಟೇರ ಸಿನಿಮಾದವರೆಗೂ ನಟಿಯಾಗಿ ಛಾಪು ಉಳಿಸಿಕೊಂಡು ಬಂದಿರುವ ನಟಿ ಶೃತಿ ಅವರು ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿ ಜೀವನ ಮಾಡುತ್ತಿದ್ದಾರೆ. ಇವರು ನಿರ್ದೇಶಕ ಮಹೇಂದ್ರ ಮೊದಲ ಗಂಡ ಹಾಗೂ ವಕೀಲ ಚಂದ್ರಚೂಡ್ ಎರಡನೇ ಗಂಡ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ.
ಚಂದ್ರಿಕಾ (Actress Chandika): ಕನ್ನಡ ಚಿತ್ರಂಗದಲ್ಲಿ 1985ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಸಿನಿಮಾದಿಂದ 2015ರಲ್ಲಿ ಬಿಡುಗಡೆಯಾದ ಕೆಂಡಸಂಪಿಗೆ ಸಿನಿಮಾದವರೆಗೆ ವಿವಿಧ ಪಾತ್ರಗಳನ್ನು ಮಾಡುತ್ತಾ 30 ವರ್ಷ ಚಿತ್ರರಂಗದಲ್ಲಿ ಜೀವನ ಸವೆಸಿದ ಚಂದ್ರಿಕಾ ಅವರು ಹಲವು ವರ್ಷಗಳಿಂದ ಗಂಡನಿಂದ ದೂರವಾಗಿ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 1ರ ಸ್ಪರ್ಧಿಯೂ ಆಗಿದ್ದರು.
ನಿಧಿ ಸುಬ್ಬಯ್ಯ (Nidhi Subbaiah): ಕೊಡಗಿನ ಕುವರಿ ನಿಧಿ ಸುಬ್ಬಯ್ಯ ಅವರು ಮಾಡೆಲಿಂಗ್ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. 2009ರಿಂದ ನಟಿಯಾಗಿ ಸಿನಿಜರ್ನಿ ಆರಂಭಿಸಿ ಇನ್ನೂ ಸಿನಿಮಾ ನಟನೆಯಲ್ಲಿ ವೃತ್ತಿಜೀವನ ಮುಂದುವರೆಸಿದ್ದಾರೆ. ನಿಧಿ ಸುಬ್ಬಯ್ಯ ತಮ್ಮ ದೀರ್ಘಕಾಲದ ಗೆಳೆಯ ಉದ್ಯಮಿ ಲವೇಶ್ ಖೈರಾಜನಿ ಅವರನ್ನು 2017 ರಲ್ಲಿ ಮದುವೆಯಾದರು. ಆದರೆ, ಅವರಿಂದ ಕೇವಲ ಒಂದು ವರ್ಷದ ಅಂತರದಲ್ಲಿ 2018ರಲ್ಲಿ ವಿಚ್ಛೇದನ ಪಡೆದರು. ಕಳೆದ ವರ್ಷದ ಚೆಫ್ ಚಿದಂಬರ, ಇಂಟರ್ಫೇಸ್ ಸಿನಿಮಾದಲ್ಲಿ ನಟಿಸಿದ್ದರು. ಹಾಲಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸೋನು ಗೌಡ (Actress Sonu Gowda) : ಕನ್ನಡ ಚಿತರಂಗದಲ್ಲಿ 2008ರಲ್ಲಿ ಇಂತಿ ನಿನ್ನ ಪ್ರೀತಿಯ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಸೋನು ಗೌಡ ಅವರು 2010ರಲ್ಲಿ ಮದುವೆ ಮಾಡಿಕೊಂಡಿದ್ದರು. ಆದರೆ, ಗಂಡ ಮನೋಜ್ ಕುಮಾರ್ ಅವರಿಂದ ದೂರವಾಗಿದ್ದಾರೆ. ನಂತರ ತಂಗಿ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು, ತಾನು ಒಬ್ಬಂಟಿ ಜೀವನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತೀಚೆಗೆ ಸಿಗ್ಲಿಂಗು-2 ಸಿನಿಮಾ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ನಟಿ ಜಾನ್ವಿ (anchor jahnavi): ಕನ್ನಡ ಸುದ್ದಿ ಮಾಧ್ಯಮದಲ್ಲಿ ಸುದ್ದಿವಾಚಕಿಯಾಗಿದ್ದ ಜಾನ್ವಿ ಜೀವನದಲ್ಲಿ ದೊಡ್ಡ ಬಿರುಗಾಳಿಯೇ ಬೀಸಿತ್ತು. ದಾಂಪತ್ಯದಲ್ಲಿ ಸರಿ ಹೋಗದೇ ತನ್ನ ಮಗನೊಂದಿಗೆ ಒಬ್ಬಂಟಿಯಾಗಿ ಜೀವನ ಆರಂಭಿಸಿದ ಜಾನ್ವಿ ಅವರಿಗೆ ಗಿಚ್ಚಿಗಿಲಿಗಿಲಿ ಶೋ ಸ್ಪರ್ಧಿಯಾಗಿ ಬಂದ ನಂತರ ಅನೇಕ ಟಿವಿ ಕಾರ್ಯಕ್ರಮಗಳ ನಿರೂಪಣೆಯೂ ಸಿಕ್ಕಿತು. ಇದೀಗ ಸಿನಿಮಾ ನಟಿಯೂ ಆಗಿದ್ದಾರೆ. ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅವರಿಗೆ ಜೋಡಿಯಾಗಿ ಅಧಿಪತ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಗಂಡನಿಂದ ಇನ್ನೂ ಅಧಿಕೃತ ಡಿವೋರ್ಸ್ ಸಿಕ್ಕಿಲ್ಲ. ಅರ್ಜಿ ಸಲ್ಲಿಕೆಯಾಗಿದ್ದು, ಡಿವೋರ್ಸ್ ಸಿಗಲಿದೆ ಎಂದು ಮಾಹಿತಿ ನಿಡಿದ್ದಾರೆ.
ನಿವೇದಿತಾ ಗೌಡ (Actress Niveditha Gowda) : ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋದ ರೀಲ್ಸ್ ಸುಂದರಿ ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯ ಮೂಲಕ ಸಿನಿಮಾವನ್ನು ಪ್ರವೇಶಿಸಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸಹ ಸ್ಪರ್ಧಿ ರ್ಯಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿ ಕೆಲವು ವರ್ಷಗಳ ನಂತರ ಡಿವೋರ್ಸ್ ಪಡೆದು, ಒಬ್ಬಂಟಿ ಜೀವನ ಮಾಡುತ್ತಿದ್ದಾರೆ. ಇದೀಗ ನಿವೇದಿತಾ ಗೌಡ ಮುದ್ದು ರಾಕ್ಷಸಿ, ಜಿಎಸ್‌ಟಿ ಹಾಗೂ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.