ಫೆ.15ರಂದು ನಿರ್ದೇಶಕಿ ರಿಷಿಕಾ ಶರ್ಮಾ ಮತ್ತು ನಿಹಾಲ್ ಮದುವೆ
ಟ್ರಂಕ್ ಮತ್ತು ವಿಜಯಾನಂದ ಸಿನಿಮಾ ನಿರ್ದೇಶನ ಮಾಡಿರುವ ರಿಷಿಕಾ ಶರ್ಮಾ ಫೆಬ್ರವರಿ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಟ್ರಂಕ್ ಮತ್ತು ವಿಜಯಾನಂದ ಸಿನಿಮಾ ನಿರ್ದೇಶನ ಮಾಡಿರುವ ರಿಷಿಕಾ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಗ್ಗೆ ರಿಷಿಕಾ ಪೋಸ್ಟ್ ಹಾಕಿದ್ದಾರೆ.
ಫೆ.15ರಂದು ಬೆಳಗ್ಗೆ 9 ಗಂಟೆಯಿಂದ 9.45ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಿಹಾಲ್ ರಜಪುತ ಎಂಬುವವರನ್ನು ಮದುವೆ ಆಗುತ್ತಿದ್ದಾರೆ.
ಜತೆಯಾಗಿ ಚಿತ್ರರಂಗಕ್ಕೆ ಬಂದು ‘ಟ್ರಂಕ್’ ಹಾಗೂ ‘ವಿಜಯಾನಂದ’ ಚಿತ್ರಗಳನ್ನು ಮಾಡಿದ ಈ ಜೋಡಿ ಈಗ ನಿಜ ಜೀವನದಲ್ಲೂ ಜೋಡಿಯಾಗುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯಲಿದೆ.
'#NihalR ಪ್ರಪಂಚ. ನಿಮ್ಮೆಲ್ಲರ ಜೊತೆ ಖುಷಿ ವಿಚಾರವನ್ನು ಹಂಚಿಕೊಳ್ಳುತ್ತಿರುವೆ. ನಿಹಾಲ್ ಮತ್ತು ನಾನು ಫೆಬ್ರವರಿಯಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದೇವೆ'
'ಮಿಲಿಯನ್ ಸಣ್ಣ ಪುಟ್ಟ ಕ್ಷಣಗಳು ನಮ್ಮ ಪ್ರೀತಿಯನ್ನು ಬ್ಯೂಟಿಫುಲ್ ಮಾಡಿದೆ. ನಮ್ಮ 9 ವರ್ಷದ ಸ್ನೇಹ- ಪ್ರೀತಿಗೆ ಇದಾಗಿತ್ತು. ಹರಸಿ ಹಾರೈಸಿ, ನಿಮ್ಮ ಪ್ರೀತಿ ವಿಶ್ವಾನ ಸದಾ ಮುನ್ನೊಡುವೆ' ಎಂದು ಬರೆದುಕೊಂಡಿದ್ದಾರೆ.
ಪ್ರಸ್ತುತ ತಿರುಪತಿಯಲ್ಲಿರುವ ರಿಷಿಕಾ ಶರ್ಮಾ ಮತ್ತು ನಿಹಾಲ್ ರಜಪುತ, ಅಲ್ಲಿಂದಲೇ ಮದುವೆ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.