- Home
- Entertainment
- Sandalwood
- ಈ ಸಿನಿಮಾ ನೋಡಿದಾಗ ಕಣ್ಣಲ್ಲಿ ನೀರು ಬಂತು, ತಕ್ಷಣವೇ ಅಪ್ಪನಿಗೆ ಕರೆ ಮಾಡಿದೆ: ಆರ್. ಚಂದ್ರು
ಈ ಸಿನಿಮಾ ನೋಡಿದಾಗ ಕಣ್ಣಲ್ಲಿ ನೀರು ಬಂತು, ತಕ್ಷಣವೇ ಅಪ್ಪನಿಗೆ ಕರೆ ಮಾಡಿದೆ: ಆರ್. ಚಂದ್ರು
ಆರ್. ಚಂದ್ರು ಅವರ ಆರ್ಸಿ ಸ್ಟುಡಿಯೋಸ್ ಲಾಂಛನದಲ್ಲಿ ಮೂಡಿಬರುತ್ತಿರುವ ‘ಫಾದರ್’ ಕನ್ನಡ ಸಿನಿಮಾದ ‘ಗಗನದ ನೇಸರ’ ಹಾಡು ಬಿಡುಗಡೆಯಾಗಿದೆ. ಅಪ್ಪ-ಮಗನ ಬಾಂಧವ್ಯವನ್ನು ಕಟ್ಟಿಕೊಡುವ ಈ ಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಪ್ಪ-ಮಗನ ಬಾಂಧವ್ಯ
ಆರ್. ಚಂದ್ರು ಅವರ ಆರ್ಸಿ ಸ್ಟುಡಿಯೋಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ‘ಫಾದರ್’ನ ‘ಗಗನದ ನೇಸರ’ ಎಂಬ ಹಾಡು ಬಿಡುಗಡೆಯಾಗಿದೆ. ಅಪ್ಪ-ಮಗನ ಬಾಂಧವ್ಯವನ್ನು ಕಟ್ಟಿಕೊಡುವ ಈ ಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಕುಲ್ ಅಭಯಂಕರ್ ಸಂಗೀತ ಸಂಯೋಜನೆ
ಮಂಜುನಾಥ್ ಮಾಗೋದಿ ಸಾಹಿತ್ಯ, ವಿಜಯ್ ಪ್ರಕಾಶ್ ಕಂಠಸಿರಿ ಹಾಗೂ ನಕುಲ್ ಅಭಯಂಕರ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಗಗನದ ನೇಸರ’ ಹಾಡನ್ನು ಸರೆಗಮ ಯೂಟ್ಯೂಬ್ ಚಾನಲ್ನಲ್ಲಿ ನೋಡಬಹುದು. ಡಿ.4ರಂದು ಸಿನಿಮಾ ಬಿಡುಗಡೆಯಾಗಲಿದೆ.
ನಮ್ಮ ಅಪ್ಪನಿಗೆ ಕರೆ ಮಾಡಿ ಮಾತನಾಡಿದೆ
ನಿರ್ಮಾಪಕ ಆರ್. ಚಂದ್ರು, ‘ಈ ಸಿನಿಮಾ ನೋಡಿದಾಗ ಕಣ್ಣಲ್ಲಿ ನೀರು ಬಂತು. ತಕ್ಷಣವೇ ನಮ್ಮ ಅಪ್ಪನಿಗೆ ಕರೆ ಮಾಡಿ ಮಾತನಾಡಿದೆ. ಪ್ರಕಾಶ್ ರೈ ಹಾಗೂ ಕೃಷ್ಣ ಅವರ ನಟನೆ ಚಿತ್ರಕ್ಕೆ ಪ್ರಾಣ ತುಂಬಿದೆ’ ಎಂದರು. ನಾಯಕ ಡಾರ್ಲಿಂಗ್ ಕೃಷ್ಣ, ‘ನಮ್ಮ ಸುತ್ತಮುತ್ತಲೇ ನಡೆಯುವ ಕಥೆಯಿದು. ಚಿತ್ರ ಕೊಟ್ಟ ದುಡ್ಡಿಗೆ ಮೋಸ ಮಾಡಲ್ಲ’ ಎಂದರು.
ರಾಜಾಮೋಹನ್ ನಿರ್ದೇಶನ
ಆನಂದ್ ಪಂಡಿತ್ ಅರ್ಪಿಸುವ, ಯಮುನಾ ಚಂದ್ರು ನಿರ್ಮಾಣದ ಈ ಚಿತ್ರವನ್ನು ರಾಜಾಮೋಹನ್ ನಿರ್ದೇಶಿಸಿದ್ದಾರೆ. ಪ್ರಕಾಶ್ ರೈ ಹಾಗೂ ಡಾರ್ಲಿಂಗ್ ಕೃಷ್ಣ ತಂದೆ, ಮಗನಾಗಿ ನಟಿಸಿದ್ದಾರೆ. ನಾಯಕಿಯಾಗಿ ಅಮೃತ ಅಯ್ಯಂಗಾರ್ ಮತ್ತು ಪ್ರಮುಖ ಪಾತ್ರದಲ್ಲಿ ನಾಗಭೂಷಣ್ ಅಭಿನಯಿಸಿದ್ದಾರೆ. ಛಾಯಾಗ್ರಾಹಕ ಸುಜ್ಞಾನ್ ಹಾಗೂ ಸಂಕಲನಕಾರ ರಘುನಾಥ್ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.






