ಚಿಟ್ಟೆ ಪ್ರಿಯಾ ಮೆಹೇಂದಿ ಫೋಟೋ; 'Blue Birds' ಎಂದು ಕಾಮೆಂಟ್ ಮಾಡಿದ ನೆಟ್ಟಿಗರು
ಸರಣಿಯಲ್ಲಿ ಮದುವೆ ಫೋಟೋ ಹಂಚಿಕೊಂಡ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ. ನೆಟ್ಟಿಗರ ಕ್ಯೂಟ್ ಕಾಮೆಂಟ್‌ಗಳು ವೈರಲ್....

ಕನ್ನಡ ಚಿತ್ರರಂಗದ ಸಿಂಪಲ್ ನಟ ಕಮ್ ಗಾಯಕ ವಸಿಷ್ಠ ಸಿಂಹ ಮತ್ತು ಸಿಂಪಲ್ ನಟಿ ಹರಿಪ್ರಿಯಾ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಮೈಸೂರಿನಲ್ಲಿ ನಡೆದ ಮದುವೆಯಲ್ಲಿ ಆಪ್ತರ ಮಾತ್ರ ಭಾಗಿಯಾಗಿದ್ದು. ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು.
ಬೆಂಗಳೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಇಬ್ಬರು ಕುಟುಂಬದವರು ಸೇರಿ ಅರಿಶಿಣ ಶಾಸ್ತ್ರ ಮತ್ತು ಮೆಹೇಂದಿ ಶಾಸ್ತ್ರ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಇಬ್ಬರೂ ಡಿಸೈನರ್ ಡ್ರೆಸ್ ಧರಿಸಿದ್ದಾರೆ.
ಮೆಹೇಂದಿ ಕಾರ್ಯಕ್ರಮಕ್ಕೆ ನೀಲಿ ಮತ್ತು ವೈಟ್ ಕಾಂಬಿನೇಷನ್ ಡ್ರೆಸ್ ಧರಿಸಿದ್ದಾರೆ. ವರ್ಷಿಣಿ ಜಾನಕಿರಾಮ್ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ಚಿಟ್ಟೆ ಪ್ರಿಯಾ, ಬ್ಲೂ ಬರ್ಡ್ಸ್, ಕ್ಯೂಟ್ ಜೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹರಿಪ್ರಿಯಾಗೆ ಯುಕ್ತಾ ಮೆಹೇಂದಿ ಅವರು ಮದರಂಗಿ ಹಾಕಿದ್ದಾರೆ.
ಹಳದಿ ಶಾಸ್ತ್ರಕ್ಕೆ ಇಬ್ಬರೂ ವೈಟ್ ಔಟ್‌ಫಿಟ್ ಧರಿಸಿದ್ದಾರೆ. ಸಿಂಪಲ್ ಬ್ಯಾಗ್ರೌಂಡ್ ಮಾಡಲಾಗಿತ್ತು ಒಬ್ಬರಿಗೊಬ್ಬರು ಅರಿಶಿ ಹಚ್ಚುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.