- Home
- Entertainment
- Sandalwood
- ಹರಿಪ್ರಿಯಾ ತಂದೆ ಕಾರ್ಯ ದಿನ ನಿಮ್ಮನ್ನು ಇಷ್ಟ ಪಡುತ್ತಿದ್ದೇನೆ ಎಂದಿದ್ದೆ: ವಸಿಷ್ಠ ಸಿಂಹ ಲವ್ ಸ್ಟೋರಿ
ಹರಿಪ್ರಿಯಾ ತಂದೆ ಕಾರ್ಯ ದಿನ ನಿಮ್ಮನ್ನು ಇಷ್ಟ ಪಡುತ್ತಿದ್ದೇನೆ ಎಂದಿದ್ದೆ: ವಸಿಷ್ಠ ಸಿಂಹ ಲವ್ ಸ್ಟೋರಿ
ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗುತ್ತಿರುವ ಹರಿಪ್ರಿಯಾ-ವಸಿಷ್ಠ ಸಿಂಹ ತಮ್ಮ ಪ್ರೇಮಪ್ರಸಂಗ ಹೇಳಿಕೊಂಡಿದ್ದಾರೆ. ಆಯ್ದ ಮಾತುಗಳು ಇಲ್ಲಿವೆ.

ನಮ್ಮ ಪ್ರೇಮ ಕತೆ ಹೊಸದು. ಸ್ನೇಹ ಹಳೆಯದು. 2016ರಿಂದ ನಾವಿಬ್ಬರು ಸ್ನೇಹಿತರು. ಎಂದೂ ಪ್ರೀಮಿಯರ್ ಶೋಗೆ ಹೋಗಿಲ್ಲ ಆದರೆ ಅಂದು ಹೋಗಿದಕ್ಕೆ ನಾವಿಬ್ಬರು ಭೇಟಿ ಆಗಿದ್ದು.
ನಾನು ಹರಿಪ್ರಿಯಾ ಅಭಿಮಾನಿ . ಅವರ ನಟನೆಯ ‘ಮನಸುಗಳ ಮಾತು ಮಧುರ’ ಚಿತ್ರದ ಹಾಡು ನನಗೆ ಈಗಲೂ ನೆಚ್ಚಿನ ಗೀತೆ. ಅವರೂ ಕೂಡ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನನ್ನ ನಟನೆ ಮೆಚ್ಚಿಕೊಂಡು ನನಗೆ ಶುಭ ಕೋರಿದರು.
ಸ್ನೇಹದ ಆಚೆಗೆ ಮೊದಲು ಪ್ರೀತಿ ಹುಟ್ಟಿಕೊಂಡಿದ್ದು ನನ್ನಲ್ಲೇ. ಆದರೆ, ಅದನ್ನು ಹೇಗೆ ಹೇಳೋದು ಅಂತ ಚಡಪಡಿಸುತ್ತಿದ್ದೆ. ಒಮ್ಮೆ ನಟ ಹಾಗೂ ನನ್ನ ಸ್ನೇಹಿತ ಧನಂಜಯ್ ಬಳಿ ಹೇಳಿಕೊಂಡೆ.
ಹರಿಪ್ರಿಯಾ ಮನೆಯಲ್ಲಿ ಲಕ್ಕಿ ಹೆಸರಿನ ನಾಯಿ ಮರಿ ಇತ್ತು. ಅದಕ್ಕೆ ಕ್ಯಾನ್ಸರ್ ಬಂದು ತೀರಿಕೊಂಡಿತ್ತು. ಆಗ ನಾನು ಕ್ರಿಸ್ಟಲ್ ಹೆಸರಿನ ನಾಯಿಮರಿ ಗಿಫ್‌್ಟಮಾಡಿದೆ. ಅದರ ಮೇಲೆ ಹಾರ್ಚ್ ಶೇಪ್ ಇತ್ತು. ಅದೇ ನಮ್ಮ ಪ್ರೀತಿಗೆ ದಾರಿ ಮಾಡಿಕೊಟ್ಟಿತು.
ಹರಿಪ್ರಿಯಾ ತಮ್ಮ ತಂದೆಯ ಕಾರ್ಯ ದಿನ ಬೇಸರದಲ್ಲಿ ಇದ್ದರು. ಅವತ್ತೇ ನಾನು ಫೋನ್ ಮಾಡಿ, ನಾನು ನಿಮ್ಮನ್ನ ಇಷ್ಟಪಡುತ್ತಿದ್ದೇನೆ. ದಯವಿಟ್ಟು ನೀವು ಈಗ ಏನೂ ರಿಪ್ಲೈ ಮಾಡಬೇಡಿ. ನನ್ನ ಪ್ರೀತಿ ಸ್ವಚ್ಛವಾಗಿದೆ. ನೀವು ಅಂದ್ರೆ ನನಗೆ ಇಷ್ಟಅಂತ ಫೋನ್ ಇಟ್ಟುಬಿಟ್ಟೆ.
ಹಾರ್ಚ್ ಶೇಪ್‌ನಲ್ಲಿ ಇದ್ದ ನಾಯಿ ಮರಿ ಗಿಫ್‌್ಟಮಾಡಿದಾಗಲೇ ಹರಿಪ್ರಿಯಾ ಅವರಿಗೂ ನನ್ನ ಮೇಲೆ ಇಷ್ಟಆಗಿತ್ತು ಎಂದು ಆಮೇಲೆ ಗೊತ್ತಾಯಿತು.
ನಮ್ಮ ಪ್ರೀತಿಗೆ ಹಿರಿಯರ ಒಪ್ಪಿಗೆ ಸಿಕ್ಕಿದೆ.ಚಿತ್ರರಂಗದಲ್ಲಿ ಇಬ್ಬರು ಮುಂದುವರಿಯುತ್ತೇವೆ. ನಮಗೆ ಸೂಕ್ತ ಎನಿಸುವ ಕತೆ ಬಂದರೆ ಜತೆಯಾಗಿ ನಟಿಸುತ್ತೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.