ಕಲ್ಪನೆಗೂ ಮೀರಿದ ಐಷಾರಾಮಿ ಜೀವನ; ದುಬೈನಲ್ಲಿ ನಟಿ ಸೋನು ಗೌಡ ಮಸ್ತಿ
ಸಹೋದರಿಯರ ಜೊತೆ ದುಬೈ ಪ್ರವಾಸದಲ್ಲಿ ಬ್ಯುಸಿಯಾಗಿರುವ ಸೋನು ಗೌಡ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್...

ಕನ್ನಡ ಚಿತ್ರರಂಗದಲ್ಲಿ 'ಇಂತಿ ನಿನ್ನ ಪ್ರೀತಿಯ' ಹಿಟ್ ಚಿತ್ರದ ಮೂಲಕ ಹೊಸ ಲವ್ ಟ್ರೆಂಡ್ ಕ್ರಿಯೇಟ್ ಮಾಡಿದ ಅಪ್ಪಟ ಕನ್ನಡತಿ ಸೋನು ಗೌಡ.
ಸಹೋದರಿ ನೇಹಾ ಗೌಡ ಜೊತೆ ಸೋನು ಗೌಡ ದುಬೈ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
'ದೊಡ್ಡ ದೊಡ್ಡ ರಸ್ತೆಗಳು, ಉದ್ದವಾದ ಬಿಲ್ಡಿಂಗಳು, ಕಲ್ಪನೆಗೂ ಮೀರಿದ ಐಷಾರಾಮಿ ಜೀವನ' ಎಂದು ಸೋನು Dubai ಬಗ್ಗೆ ಬರೆದುಕೊಂಡಿದ್ದಾರೆ.
ನಿಜ ಜೀವನದಲ್ಲಿ ಆದಷ್ಟು ಫ್ಯಾನ್ಸಿ ಪ್ರಪಂಚ (Fancy World) ನೋಡಬೇಕು ಅಂದ್ರೆ ಅದು ದುಬೈನಲ್ಲಿ ಮಾತ್ರ ಎಂದು ಸೋನು ಹೇಳಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನು ಗೌಡ ಯುಟ್ಯೂಬ್ ಚಾನೆಲ್ ತೆರೆದಿದ್ದಾರೆ. ತಮ್ಮ ಸಿನಿಮಾ ಕೆಲಸಗಳು, ಲೈಫ್ ಸ್ಟೈಲ್ ಮತ್ತು ಫ್ಯಾಷನ್ ಬಗ್ಗೆ ವಿಡಿಯೋ ಮಾಡುತ್ತಾರೆ.
ಕಳೆದ ತಿಂಗಳು ಸಹೋದರಿಯರು ಮತ್ತು ಸ್ನೇಹಿತರ ಜೊತೆ ಆಫ್ರೀಕಾದಲ್ಲಿ (Afria) ವೈಲ್ಡ್ ಲೈಫ್ ಸಫಾರಿ ಎಂಜಾಯ್ ಮಾಡಿದ್ದಾರೆ.
'ಕೀನ್ಯಾದ (Kenya), ನೈರೋಬಿ ಮಸಾಯಿ ಮಾರಾಗೆ (Masai Mara) ಭೇಟಿ ನೀಡಿದ್ದರು. ಸಿಂಹಗಳ ಜೊತೆ ಸೆಲ್ಫಿ ಕೂಡ ಕ್ಲಿಕ್ ಮಾಡಿಕೊಂಡಿದ್ದರು.