'ಫೇರ್ ಆ್ಯಂಡ್ ಲವ್ಲಿ' ಹುಡ್ಗಿ ಈಸ್ ಬ್ಯಾಕ್ ಟು ಸ್ಯಾಂಡಲ್‌ವುಡ್: ಫೋಟೋಸ್ ನೋಡಿ!
'ಮುಖಾಮುಖಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ನಂತರ ಸಿನಿ ಜರ್ನಿಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮದರ್‌ಹುಡ್ ಎಂಜಾಯ್ ಮಾಡುತ್ತಿದ್ದರು. ಈ ಮತ್ತೊಮ್ಮೆ 'ರಹದಾರಿ' ಚಿತ್ರದ ಮೂಲಕ ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ. ಗ್ಲಾಮರಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು.
2006 ರಲ್ಲಿ 'ಮುಖಾಮುಖಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.
2013 ರಲ್ಲಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ ಬಿಗ್ ಬ್ರೇಕ್ ಕೊಟ್ಟಿತು.
2014 ರಲ್ಲಿ 'ಫೇರ್ ಆ್ಯಂಡ್ ಲವ್ಲಿ' ಚಿತ್ರಕ್ಕೆ ಬೆಸ್ಟ್ ನಟಿಯಾಗಿ ಫಿಲ್ಮ್‌ಫೇರ್ ಅವಾರ್ಡ್ ಗಿಟ್ಟಿಸಿಕೊಂಡರು
ನಟನೆಯ ಹೊರತಾಗಿ ಇವರಿಗೆ ಪ್ರಾಣಿಗಳ ಮೇಲಿರುವ ಪ್ರೀತಿ ಜನರ ಮನಸ್ಸು ಗೆದ್ದಿದೆ.
2007 ರಲ್ಲಿ 'ಆ ದಿನಗಳು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
2016 ರಲ್ಲಿ 'ಕಿರಗೂರಿನ ಗೈಯ್ಯಾಳಿಗಳು' ಚಿತ್ರ ಇವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ.
2017 ರಲ್ಲಿ ಅಮಿತ್ ಶ್ರೀವಾತ್ಸವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ.
ಪುತ್ರಿ ಅಶ್ಮಿತಾ ಶ್ರೀವಾತ್ಸವ್‌ಗೆ ಇನ್‌ಸ್ಟಾಗ್ರಾಂ ಖಾತೆ ತೆರೆದು ಆಕೆಯ ಫೋಟೋ ಮತ್ತು ವಿಡಿಯೋ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಮದುವೆಯಾದ ನಂತರ 'ರಹದಾರಿ' ಚಿತ್ರದ ಮೂಲಕ ಮತ್ತೊಮ್ಮೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಕಮ್ ಬ್ಯಾಕ್ ಮಾಡುವ ಮುನ್ನ ಗ್ಲಾಮರಸ್ ಪೋಟೋಶೂಟ್ ಮಾಡಿಸಿದ್ದಾರೆ.