- Home
- Entertainment
- Sandalwood
- Pappy Movie ನೋಡಿ ಫಿದಾ ಆದ ನಟಿ ರಮ್ಯಾ; ಆ ವೈರಲ್ ಮಕ್ಕಳಿಗೆ ಸೈಕಲ್ ಗಿಫ್ಟ್ ಕೊಟ್ರು!
Pappy Movie ನೋಡಿ ಫಿದಾ ಆದ ನಟಿ ರಮ್ಯಾ; ಆ ವೈರಲ್ ಮಕ್ಕಳಿಗೆ ಸೈಕಲ್ ಗಿಫ್ಟ್ ಕೊಟ್ರು!
‘ಪಪ್ಪಿ’ ಎಂಬ ಕನ್ನಡ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾದ ಕಂಟೆಂಟ್‌ನ್ನು ನಟಿ ರಮ್ಯಾ ಅವರು ಮೆಚ್ಚಿದ್ದಾರೆ. ಈ ಸಿನಿಮಾದಲ್ಲಿ ನಟಿಸಿರುವ ಮಕ್ಕಳ ಅಭಿನಯಕ್ಕೆ ನಟಿ ರಮ್ಯಾ ಇಷ್ಟಪಟ್ಟಿದ್ದಾರೆ. ಹೀಗಾಗಿ ಅವರು ಆ ಮಕ್ಕಳಿಗೆ ಸೈಕಲ್‌ನ್ನು ಗಿಫ್ಟ್ ಕೊಟ್ಟಿದ್ದಾರೆ.

‘ಪಪ್ಪಿ’ ಎಂಬ ಕನ್ನಡ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾದ ಕಂಟೆಂಟ್‌ನ್ನು ನಟಿ ರಮ್ಯಾ ಅವರು ಮೆಚ್ಚಿದ್ದಾರೆ. ಈ ಸಿನಿಮಾದಲ್ಲಿ ನಟಿಸಿರುವ ಮಕ್ಕಳ ಅಭಿನಯಕ್ಕೆ ನಟಿ ರಮ್ಯಾ ಇಷ್ಟಪಟ್ಟಿದ್ದಾರೆ. ಹೀಗಾಗಿ ಅವರು ಆ ಮಕ್ಕಳಿಗೆ ಸೈಕಲ್‌ನ್ನು ಗಿಫ್ಟ್ ಕೊಟ್ಟಿದ್ದಾರೆ.
ನಟಿ ರಮ್ಯಾ ಅವರು ಶ್ವಾನಪ್ರಿಯೆ. ಈ ವಿಚಾರವು ಸಿನಿಮಾಪ್ರೇಮಿಗಳಿಗೆ ಗೊತ್ತಿರುವ ವಿಚಾರವೇ. ಶ್ವಾನಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಈ ನಟಿ ಈಗ ಶ್ವಾನದ ಸುತ್ತ ಸಾಗುವ ಒಂದು ಸುಂದರ ಜವಾರಿ ಭಾಷೆಯ ʼಪಪ್ಪಿʼ ಸಿನಿಮಾದ ಕಥೆಗೆ ಫಿದಾ ಆಗಿದ್ದಾರೆ.
ನಟಿ ರಮ್ಯಾ ಅವರು ಈ ಹಿಂದೆಯೇ ಪಪ್ಪಿ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದರು. ಇಂದು ಈ ಸಿನಿಮಾಕ್ಕೆ ಶುಭಾಶಯ ತಿಳಿಸಿದ್ದಾರೆ. ಶ್ವಾನ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಮಕ್ಕಳ ಮುಗ್ಧ ಅಭಿನಯಕ್ಕೆ ನಟಿ ರಮ್ಯಾ ಅವರು ಮನಸೋತಿದ್ದಾರೆ. ಅಷ್ಟೇ ಅಲ್ಲದೆ ಸೈಕಲ್‌ನ್ನು ಗಿಫ್ಟ್ ಮಾಡಿದ್ದಾರೆ.
ʼಪಪ್ಪಿʼ ಸಿನಿಮಾದಲ್ಲಿ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ಅವರು ಬಾಲ ಕಲಾವಿದರಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಇನ್ನು ಸೈಕಲ್ ನೋಡಿ ಆ ಮಕ್ಕಳು ಫುಲ್ ಖುಷಿಯಾಗಿದ್ದಾರೆ.
ʼಪಪ್ಪಿʼ ಸಿನಿಮಾದಲ್ಲಿ ಅಪ್ಪಟ ಉತ್ತರ ಕರ್ನಾಟಕದ ಭಾಷೆ ಇದ್ದು, ಪಕ್ಕಾ ಕೌಟುಂಬಿಕ ಚಿತ್ರ ಎನಿಸಿಕೊಂಡಿದೆ. ಇನ್ನು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ರಮ್ಯಾ ಅವರು ಶೀಘ್ರದಲ್ಲೇ ಈ ಸಿನಿಮಾ ನೋಡಲಿದ್ದಾರೆ.
ನಟ ಧ್ರುವ ಸರ್ಜಾ ಅರ್ಪಿಸಿರುವ ಈ ಸಿನಿಮಾಗೆ ಆಯುಷ್ ಮಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಜಗದೀಶ್ ಕೊಪ್ಪಳ, ಆರಾವ ಲೋಹಿತ್ ನಾಗರಾಜ್, ಆದಿತ್ಯ ಸಿಂಧನೂರು, ಅದೃಷ್ಟ ಸಂಕನೂರು, ದುರುಗಪ್ಪ ಕಾಂಬ್ಳಿ, ಋತ್ವಿಕ್ ಬಳ್ಳಾರಿ, ರೇಣುಕಾ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಬಿ ಸುರೇಶ್ ಬಾಬು ಕ್ಯಾಮರಾ ಕೈಚಳಕ ಈ ಸಿನಿಮಾಕ್ಕಿದೆ. ವಿಶ್ವ ಎನ್ ಎಂ ಸಂಕಲನ ಈ ಸಿನಿಮಾಕ್ಕಿದೆ. ಹಾಸ್ಯದ ಜೊತೆಗೆ ಗಂಭೀರ ವಿಷಯ ಕೂಡ ಈ ಸಿನಿಮಾದಲ್ಲಿದೆ.