- Home
- Entertainment
- Sandalwood
- ಬ್ಲ್ಯಾಕ್ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಮಿಂಚಿಂಗ್: ನಿಮ್ ಕಿವಿ ಮೇಲೆ ಫ್ಲವರ್ ಇಟ್ಟಿದ್ಯಾರು ಎಂದ ಫ್ಯಾನ್ಸ್!
ಬ್ಲ್ಯಾಕ್ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಮಿಂಚಿಂಗ್: ನಿಮ್ ಕಿವಿ ಮೇಲೆ ಫ್ಲವರ್ ಇಟ್ಟಿದ್ಯಾರು ಎಂದ ಫ್ಯಾನ್ಸ್!
ಸ್ಯಾಂಡಲ್‌ವುಡ್ ಬ್ಯೂಟಿ ಮೇಘಾ ಶೆಟ್ಟಿ ಅವರು ಸದ್ಯ ಡಿಮ್ಯಾಂಡ್‌ನಲ್ಲಿರುವ ನಟಿ. ‘ಕೈವ’ ಸಿನಿಮಾ ನಂತರ ಸಾಕಷ್ಟು ಆಫರ್ಸ್ ಬಾಚಿಕೊಳ್ತಿರೋ ಮೇಘಾ ಇದೀಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಇದೀಗ ಮೇಘಾ ಸ್ಟೈಲಿಶ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
ಕಪ್ಪು ಬಣ್ಣ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಕಿವಿ ಮೇಲೆ ಫ್ಲವರ್ ಇಟ್ಟುಕೊಂಡಿರೋ ಫೋಟೋ ಶೇರ್ ಮಾಡಿರೋ ಮೇಘಾಗೆ ಅತಿಲೋಕ ಸುಂದರಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಹಾಡಿಹೊಗಳುತ್ತಿದ್ದಾರೆ.
ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್ಗಳ ಸುರಿಮಳೆ ಗೈದಿದ್ದಾರೆ. ಸೂಪರ್, ನೈಸ್, ಬ್ಯೂಟಿಫುಲ್ ಎಂದು ಕಮೆಂಟ್ ಹಾಕಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.
‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಟಿವಿ ಜಗತ್ತಿಗೆ ಪರಿಚಿತರಾದ ಮೇಘಾ ಶೆಟ್ಟಿ ಅವರು ಈಗ ಬೆಳ್ಳಿತೆರೆಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡ್ತಿದ್ದಾರೆ. ಅನು ಸಿರಿಮನೆ ಎಂಬ ಪಾತ್ರದ ಮೂಲಕ ಕಿರುತೆರೆ ಮನೆ ಮಾತಾಗಿದ್ದ ನಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಮಿಂಚ್ತಿದ್ದಾರೆ.
ದಿಲ್‌ಪಸಂದ್, ತ್ರಿಬಲ್ ರೈಡಿಂಗ್, ‘ಕೈವ’ ಸಿನಿಮಾಗಳಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಮೇಘಾ ಸದ್ದು ಮಾಡಿದ್ದಾರೆ. ಸದ್ಯ ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ‘ಗ್ರಾಮಾಯಣ’ ಚಿತ್ರದಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.