ಸಹೋದರನನ್ನು ಕಳದುಕೊಂಡ ನಟಿ ಅನಿತಾ ಭಟ್ ಭಾವುಕ ಪೋಸ್ಟ್
ಸಹೋದರನ ಜೊತೆ ಬಾಲ್ಯದ ಫೋಟೋ ಹಂಚಿಕೊಂಡ ಅನಿತಾ ಭಟ್. ಭಾವುಕ ಪೋಸ್ಟ್ ವೈರಲ್..

2008ರಲ್ಲಿ ಸೈಕೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅನಿತಾ ಭಟ್ ಸಹೋದರನನ್ನು ಕಳೆದುಕೊಂಡಿದ್ದಾರೆ.
'ನನ್ನ ಹೃದಯದ ಒಂದು ಭಾಗ ನಿನ್ನೆ ಮುರಿದು ಬಿದ್ದಿದ್ದೆ. ಹೃದಯಘಾತದಿಂದ ನನ್ನ ಸಹೋದರನನ್ನು ಕಳೆದುಕೊಂಡಿರುವೆ. ಪದಗಳಲ್ಲಿ ನನ್ನ ನೋವನ್ನು ವರ್ಣಿಸಲು ಆಗದು' ಎಂದು ಅನಿತಾ ಭಟ್ ಬರೆದುಕೊಂಡಿದ್ದಾರೆ.
'ಎಷ್ಟು ನೋವಾಗುತ್ತಿದೆ ಎಂದು ಹೇಳಿಕೊಳ್ಳಲು ಆಗಲ್ಲ. ಆದರೆ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು ಅವರು ಎಂದಿಗೂ ಹಿಂತಿರುಗಿ ಬರುವುದಿಲ್ಲ' ಎಂದು ಅನಿತಾ ಹೇಳಿದ್ದಾರೆ.
'ನನ್ನ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶೀರ್ವಾದ ಮಾಡಿ. ಈ ಸಮಯದಲ್ಲಿ ನಿಮ್ಮ ಆಶೀರ್ವಾದ ನಮಗೆ ಅಗತ್ಯವಿದೆ' ಎಂದು ಅನಿತಾ ಭಾವುಕರಾಗಿದ್ದಾರೆ.
ಬ್ಲಾಕ್ ಆಂಡ್ ವೈಟ್ ಬಾಲ್ಯದ ಫೋಟೋ ಮತ್ತು ಇತ್ತೀಚಿಗೆ ಸೆರೆ ಹಿಡಿದ ಕಲರ್‌ಫುಲ್ ಫೋಟೋವನ್ನು ಅನಿತಾ ಅಪ್ಲೋಡ್ ಮಾಡಿದ್ದಾರೆ.
ಅಣ್ಣ ಅಣ್ಣನೇ ತವರು ಮನೆಯ ಕೊಂಡಿ. ಯಾರಿಂದಲೂ ತುಂಬಲಾಗುವುದಿಲ್ಲಾ. ನಿಮ್ಮ ಅಣ್ಣನ ಆತ್ಮಕ್ಕೆ ಸಾಗರದ ನಮ್ಮಿಂದ ಸಂಬಂಧಿಕರಿಂದ ಆತ್ಮಿಯ ಅಶ್ರುತರ್ಪಣ. ಓಂ ಶಾಂತಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.