ಅಬ್ಬಬ್ಬಾ! ಇಷ್ಟು ಚಿಕ್ಕ ವಯಸ್ಸಿಗೆ ನಟಿ ಅಮೂಲ್ಯ ಮಕ್ಕಳು ಎಷ್ಟು ಸ್ಟೈಲ್ ಮಾಡ್ತಾರೆ ನೋಡಿ....
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಅಮೂಲ್ಯ ಸ್ಟೈಲಿಷ್ ಫೋಟೋಗಳು. ಬೇಬಿ ರೋಬ್ಸ್ ಸ್ವ್ಯಾಗ್......
ಕನ್ನಡ ಚಿತ್ರರಂಗದ ಚೆಲುವಿನ ಚಿತ್ತಾರ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಪ್ರತಿ ತಿಂಗಳು ಮಕ್ಕಳಿಗೆ ಫೋಟೋಶೂಟ್ ಮಾಡಿಸುತ್ತಾರೆ.
ಪ್ರತಿ ತಿಂಗಳು ವಿಭಿನ್ನವಾಗಿರುವ ಕಾನ್ಸೆಪ್ಟ್‌ಗಳನ್ನು ಕ್ರಿಯೇಟ್ ಮಾಡಿ ಅಥರ್ವ್ ಮತ್ತು ಆಧವ್ ಫೋಟೋಶೂಟ್ ಮಾಡಲಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಅಥರ್ವ್ ಮತ್ತು ಆಧವ್ ಹಳದಿ ಬಣ್ಣದ ಬಾತ್‌ರೂಬ್ (bathrobe) ಧರಿಸಿದ್ದಾರೆ.
ಮನೆ ಗಾರ್ಡನ್‌ನಲ್ಲಿ ಬ್ಯಾಕ್‌ಡ್ರಾಪ್‌ಗಳನ್ನು ಬಳಸುತ್ತಾರೆ. ವೈಟ್ ಸೆಟ್ ಮುಂದೆ ಜ್ಯೂಸ್ ಟೇಬಲ್ ಇಟ್ಟು ಮಕ್ಕಳಿಬ್ಬರು ಪೋಸ್ ಕೊಟ್ಟಿದ್ದಾರೆ.
ಅಥರ್ವ್ ಮತ್ತು ಆಧವ್ ಸುಮಾರು 11 ತಿಂಗಳಿದ್ದಾಗ ಈ ಫೋಟೋಶೂಟ್ ಮಾಡಲಾಗಿದೆ. ಕ್ಯೂಟಿ ಎಂದು ನಟಿ ಅದ್ವಿತಿ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ.
ಅಥರ್ವ್ (Atharv) ಮತ್ತು ಆಧವ್ (Aadhav) ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಓಪನ್ ಮಾಡಲಾಗಿದೆ. ಅಮೂಲ್ಯ ಮ್ಯಾನೇಜ್ ಮಾಡುತ್ತರು. Aadhav
ಸುಮಾರು 16 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅವಳಿ ಮಕ್ಕಳು ಸಖತ್ ಲಕ್ಷ್ಯೂರಿಯಾಗಿ ಬೆಳೆಯುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಾರೆ.