ಸ್ಪಂದನಾ ವಿಜಯ್ ರಾಘವೇಂದ್ರ ಹುಟ್ಟುಹಬ್ಬ; ನಕ್ಕು ನಲಿದು ಹೃದಯಿಸಿದ ಜೀವ ಎಂದ ನಟ!
ಪತ್ನಿ ನೆನೆದು ಭಾವುಕರಾದ ರಾಘು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು ಸ್ಪಂದನಾ ವಿಜಯ್‌ರಾಘವೇಂದ್ರ ಪೋಟೋಗಳು....

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿಯನ್ನು ನೆನೆದು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇಂದು ಸ್ಪಂದನಾ ಹುಟ್ಟುಹಬ್ಬ.
44 ವರ್ಷದ ಸ್ಪಂದನಾ ಹುಟ್ಟಿದ್ದು ಜೂನ್ 28ರಂದು. ಮಂಗಳೂರಿನ ಈ ಸುಂದರಿ ಬೆಳೆದಿದ್ದು ಬೆಂಗಳೂರಿನಲ್ಲಿ. 2007ರಲ್ಲಿ ವಿಜಯ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು.
ಆಗಸ್ಟ್ 7 2023ರಲ್ಲಿ ಹೃದಯಾಘಾತದಿಂದ ಸ್ಪಂದನಾ ಕೊನೆಯುಸಿರೆಳೆದಿದ್ದಾರೆ. ಬ್ಯಾಂಕಾಕ್‌ನಿಂದ ಸ್ಪಂದನಾ ಮೃತದೇಹವನ್ನು ತರುವುದು ದೊಡ್ಡ ಸಾಹಸವಾಗಿತ್ತು.
ಇಂದು ಪತ್ನಿ ಜೊತೆಗಿಲ್ಲದೆ ಆಕೆಯ ಮೊದಲ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಆಕೆಯನ್ನು ನೆನೆದು ಬರೆದುಕೊಂಡಿರುವ ಸಾಲುಗಳು ವೈರಲ್ ಆಗುತ್ತಿದೆ.
'ಚಿನ್ನ..ನಕ್ಕು ನಲಿದಯ ಹೃದಯಿಸಿದ ಜೀವ...ನಗುವಲ್ಲೆ ಧೈರ್ಯ ತುಂಬಿ ಮರೆಸಿದೆ ನೋವ' ಎಂದು ವಿಜಯ್ ರಾಘವೇಂದ್ರ ಬರೆದುಕೊಂಡಿದ್ದಾರೆ.
'ಎದೆಯಾಳದಲ್ಲಿ ತಬ್ಬಿ ಮುದ್ದಿಸುವ ಆಸೆ ಇಂದು..ನಿನ್ನ ಜನುಮ ಶಾಶ್ವತ ನನ್ನಲ್ಲಿ ಇಂದು ಮುಂದೂ ಎಂದೆಂದೂ' ಎಂದಿದ್ದಾರೆ ರಾಘು....
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.