#HappyBirthday ಹಾಫ್ ಸೆಂಚುರಿ ಮುಟ್ಟಿದ 'ಅಧ್ಯಕ್ಷ' ಶರಣ್!
ಕನ್ನಡ ಚಿತ್ರರಂಗದ ಅದ್ಭುತ ನಟ ಶರಣ್ ಇದೀಗ 50ರ ವಸಂತಕ್ಕೆ ಕಾಲಿಟ್ಟದ್ದಾರೆ. ಶರಣ್ ಸಿನಿ ಜರ್ನಿ ಹೇಗಿತ್ತು ಗೊತ್ತಾ?
1996ರಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಶರಣ್ ಇದೀಗ 50ರ ವಸಂತಕ್ಕೆ ಕಾಲಿಟ್ಟಿದ್ದಾರೆ.
2012ರಲ್ಲಿ Remo ಚಿತ್ರವನ್ನು ನಿರ್ಮಾಣ (Producer) ಮಾಡುವುದರ ಜೊತೆಗೆ ಕಿಟ್ಟಿ ಪಾತ್ರದಲ್ಲಿ ವೀಕ್ಷಕರನ್ನು ಮನೋರಂಜಿಸಿದ್ದರು.
ಶರಣ್ ವೃತ್ತಿ ಜೀವನದಲ್ಲಿ ನಟನಾಗಲು ದೊಡ್ಡ ಬ್ರೇಕ್ ಕೊಟ್ಟಂತ ಸಿನಿಮಾ ಅಂದ್ರೆ 'ಅಧ್ಯಕ್ಷ'. ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು.
ವಿಕ್ಟರಿ, ರಾಜ ರಾಜೇಂದ್ರ, ಬುಲೆಟ್ ಬಸಯ್ಯ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ವಿಕ್ಟರ್ 2 ಸಿನಿಮಾದಲ್ಲಿ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಶರಣ್ ನಟನೆಯ ಅವತಾರ ಪುರುಷ (Avatara Purusha) ಮತ್ತು ಗುರು ಶಿಷ್ಯರು ಸಿನಿಮಾ ಚಿತ್ರೀಕರಣ ಮುಗಿದಿದ್ದು, ಈ ವರ್ಷ ಬಿಡುಗಡೆಯಾಗಲಿದೆ.
ನಾಯಕನಾಗಿ ಮಾತ್ರವಲ್ಲದೇ ರಾಜ ರಾಜೇಂದ್ರ, ವಜ್ರಕಾಯ, ಬುಲೆಟ್ ಬಸಯ್ಯ ಮತ್ತು ದನ ಕಾಯೋನು ಸಿನಿಮಾಗಳಲ್ಲಿಯೂ ಶರಣ್ ಹಾಡಿದ್ದಾರೆ.
ಇತ್ತೀಚಿಗೆ ಸೋಷಿಯಲ್ ಮೀಡಿಯಾಗೆ ಕಾಲಿಟ್ಟ ಶರಣ 52 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ದಿನಚರಿ, ಸಿನಿಮಾ ಕೆಲಸಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.